ಮೇಷ: ಮಾನಸಿಕವಾಗಿ ಕೆಲವು ಚಿಂತೆಗಳು ನಿಮ್ಮನ್ನು ಕಾಡಲಿದೆ. ಅನಗತ್ಯ ಮಾತುಗಳಿಗೆ ಕಡಿವಾಣವಿರಲಿ. ಮಕ್ಕಳಿಗಾಗಿ ಕೆಲವೊಂದು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಹಣಕಾಸಿನ ಖರ್ಚು ವೆಚ್ಚಗಳಾಗಬಹುದು.
ವೃಷಭ: ವೃತ್ತಿರಂಗದಲ್ಲಿ ಗೌರವ, ಸ್ಥಾನಮಾನಾದಿಗಳು ಲಭ್ಯವಾಗಲಿದೆ. ಸಾಂಸಾರಿಕವಾಗಿ ಸುಖ, ಸಮೃದ್ಧಿ ಕಂಡುಬರುವುದು. ದೇವತಾ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಆರೋಗ್ಯದ ಬಗ್ಗೆ ಕಾಳಜಿಯಿರಲಿ.
ಮಿಥುನ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮ ನೈಪುಣ್ಯ ಒರೆಗೆ ಹಚ್ಚಲಿದ್ದೀರಿ. ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದ ತೃಪ್ತಿ ನಿಮಗೆ ಸಿಗಲಿದೆ. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗಲಿದೆ.
ಕರ್ಕಟಕ: ಸಮಾಜ ಮುಖೀ ಕಾರ್ಯಗಳಿಂದ ಇತರರ ಗಮನ ಸೆಳೆಯಲಿದ್ದೀರಿ. ನೆರೆಹೊರೆಯವರೊಂದಿಗೆ ಸಂಬಂಧ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಕಠಿಣ ಪರೀಕ್ಷೆಗಳು ಎದುರಾಗಲಿವೆ. ತಾಳ್ಮೆಯಿರಲಿ.
ಸಿಂಹ: ನಿಮ್ಮ ಕೆಲಸ ಕಾರ್ಯಗಳಲ್ಲಿ ಮೂರನೆಯವರು ಮೂಗು ತೂರಿಸಲು ಅವಕಾಶ ಕೊಡಬೇಡಿ. ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ. ಇಷ್ಟಮಿತ್ರರನ್ನು ಭೇಟಿಯಾಗುವ ಯೋಗವಿದೆ.
ಕನ್ಯಾ: ಯಾವುದೇ ಕೆಲಸ ಮಾಡುವ ಮುನ್ನ ಹಿರಿಯರ ಅಭಿಪ್ರಾಯ ಆಲಿಸಿ. ಮಾತೃ ಸಮಾನರ ಆರೋಗ್ಯದ ಬಗ್ಗೆ ಕಾಳಜಿಯಿರಲಿ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆ.
ತುಲಾ: ಎಷ್ಟೋ ದಿನಗಳಿಂದ ಬಾಕಿಯಿದ್ದ ಕೆಲಸಗಳನ್ನು ಪೂರ್ತಿ ಮಾಡಲು ಮುಂದಾಗಲಿದ್ದೀರಿ. ಹಿರಿಯರಿಗೆ ದೇವಾಲಯ ಸಂದರ್ಶನ ಯೋಗ. ಸಂತಾನಾಪೇಕ್ಷಿತ ದಂಪತಿಗಳು ದೇವರ ಮೊರೆ ಹೋಗಲಿದ್ದಾರೆ.
ವೃಶ್ಚಿಕ: ಅದೃಷ್ಟವಶಾತ್ ಕೆಲವೊಂದು ವಿಚಾರಗಳು ನಿಮ್ಮ ಪರವಾಗಿ ನಡೆಯಲಿದೆ. ಸರಕಾರೀ ಕೆಲಸಗಳಿಗಾಗಿ ಓಡಾಟ ನಡೆಸಬೇಕಾಗುತ್ತದೆ. ದೇಹಾರೋಗ್ಯದ ಸಮಸ್ಯೆಗಳಿಗೆ ಶೀಘ್ರವೇ ಪರಿಹಾರ ಕಂಡುಕೊಳ್ಳಿ.
ಧನು: ಬಂಧು ಮಿತ್ರರನ್ನು ಭೇಟಿಯಾಗುವ ಯೋಗ. ದೇಹಾರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಅಧ್ಯಯನಪ್ರವೃತ್ತರಿಗೆ ಹೊಸ ಅವಕಾಶಗಳು ಬರಲಿವೆ.
ಮಕರ: ಹಣಕಾಸಿನ ವಿಚಾರದಲ್ಲಿ ಬೇರೆಯವರ ಸಲಹೆಗಳನ್ನು ನಂಬಿ ವಂಚನೆಗೊಳಗಾಗಬೇಡಿ. ಕೌಟುಂಬಿಕವಾಗಿ ಹೊಸ ಜವಾಬ್ಧಾರಿಗಳು ಹೆಗಲಿಗೇರಲಿವೆ. ಸರಕಾರೀ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಂಡುಬರಲಿದೆ.
ಕುಂಭ: ದೈಹಿಕವಾಗಿ ಹೆಚ್ಚು ಶ್ರಮಪಡುವ ಕೆಲಸ ಮಾಡಬೇಕಾಗಿ ಬರಲಿದೆ. ಸಾಂಸಾರಿಕವಾಗಿ ಸುಖ, ಸಮೃದ್ಧಿ ಕಂಡುಬರುವುದು. ಹಣ ಗಳಿಕೆಗೆ ನಾನಾ ಮಾರ್ಗಗಳ ಬಗ್ಗೆ ಚಿಂತನೆ ನಡೆಸಲಿದ್ದೀರಿ.
ಮೀನ: ದೇವತಾ ಕಾರ್ಯಗಳಲ್ಲಿ ಶ್ರದ್ಧೆ ಕಂಡುಬರಲಿದೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿ ಯೋಗ. ಸ್ವಯಂ ವೃತ್ತಿಯವರಿಗೆ ಮುನ್ನಡೆ. ಅವಿವಾಹಿತರಿಗೆ ಶೀಘ್ರದಲ್ಲೇ ಕಂಕಣ ಭಾಗ್ಯ ಕೂಡಿಬರಲಿದೆ.