ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 22 ಆಗಸ್ಟ್ 2023 (08:00 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ದೇಹಾರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಂಗಾತಿಯ ಕೆಲವೊಂದು ಮಾತುಗಳು ಅಪಥ್ಯವೆನಿಸೀತು. ಮಕ್ಕಳ ನಿಮಿತ್ತ ಖರ್ಚು ವೆಚ್ಚಗಳು ಕಂಡುಬರಲಿದೆ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ತವರಿಗೆ ಮರಳುವ ಯೋಗ. ಹಣಕಾಸಿನ ಹೂಡಿಕೆಗಳಲ್ಲಿ ಲಾಭ ಕಂಡುಬರಲಿದೆ. ತಾಂತ್ರಿಕ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸ ಕಂಡುರಲಿದೆ. ತಾಳ್ಮೆಯಿರಲಿ.

ಮಿಥುನ: ಉದ್ಯೋಗ, ವ್ಯವಹಾರದಲ್ಲಿ ನಿಮ್ಮದಲ್ಲದ ತಪ್ಪಿಗೆ ಬೆಲೆ ತೆರುವ ಸಂದರ್ಭ ಬಂದೀತು. ಹಣಕಾಸಿನ ವಿಚಾರದಲ್ಲಿ ಅನ್ಯರ ಸಲಹೆಗಳಿಗೆ ಅತಿಯಾಗಿ ಕಿವಿಗೊಡುವುದು ಬೇಡ. ಸರಕಾರೀ ನೌಕರರಿಗೆ ಕಾರ್ಯದೊತ್ತಡವಿರಲಿದೆ.

ಕರ್ಕಟಕ: ಹೊಸ ರೀತಿಯ ಯೋಜನೆಗಳನ್ನು ನಿಮ್ಮ ಕೆಲಸ ಕಾರ್ಯದಲ್ಲಿ ಅಳವಡಿಸಿಕೊಳ್ಳಲಿದ್ದೀರಿ. ಹಣಕಾಸಿನ ಹರಿವಿಗೆ ತೊಂದರೆಯಾಗದು. ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ.

ಸಿಂಹ: ವ್ಯಾಪಾರೀ ವರ್ಗದವರಿಗೆ ಸಾಲಗಾರರ ಕಾಟ ಕಂಡುಬಂದೀತು. ರಾಜಕೀಯ ರಂಗದಲ್ಲಿರುವವರಿಗೆ ಮುನ್ನಡೆ. ಮೇಲಧಿಕಾರಿಗಳಿಂದ ಕಾರ್ಯದೊತ್ತಡವಿರಲಿದೆ. ಸಾಂಸಾರಿಕವಾಗಿ ಪರಸ್ಪರ ಸಹಕಾರವಿರಲಿದೆ.

ಕನ್ಯಾ: ವಿಶೇಷ ವ್ಯಕ್ತಿಗಳಿಂದ ಸಿಗುವ ಸಲಹೆಗಳು ಉಪಯೋಗಕ್ಕೆ ಬರಲಿದೆ. ಇಷ್ಟಮಿತ್ರರೊಂದಿಗೆ ಇಷ್ಟ ಭೋಜನ ಮಾಡುವ ಯೋಗ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಿದ್ದೀರಿ. ಅನಗತ್ಯ ಚಿಂತೆ ಬೇಡ.

ತುಲಾ: ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡುಬರಲಿದೆ. ಕೌಟುಂಬಿಕವಾಗಿ ಸುಖ, ಸಮೃದ್ಧಿ ಕಂಡುಬರುವುದು. ಮಕ್ಕಳಿಗೆ ಅನಿರೀಕ್ಷಿತ ಉಡುಗೊರೆ ನೀಡಲಿದ್ದೀರಿ. ಕಿರು ಸಂಚಾರ ಮಾಡಬೇಕಾಗುತ್ತದೆ.

ವೃಶ್ಚಿಕ: ನಿಮ್ಮ ಕ್ರಿಯಾಶೀಲ ಕೆಲಸಗಳು ಎಲ್ಲರ ಗಮನ ಸೆಳೆಯಲಿದೆ. ಸಾಮಾಜಿಕವಾಗಿ ಸ್ಥಾನ ಮಾನ ವೃದ್ಧಿಯಾಗುವುದು. ಮಹಿಳೆಯರಿಗೆ ಗೃಹಕೃತ್ಯಗಳಿಂದ ಕೊಂಚ ಬಿಡುವು ಸಿಗುವುದು. ದಿನದಂತ್ಯಕ್ಕೆ ನೆಮ್ಮದಿ.

ಧನು: ಮಕ್ಕಳ ದೇಹಾರೋಗ್ಯದಲ್ಲಿ ಸುಧಾರಣೆ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗಲಿದೆ. ಹಿರಿಯರಿಗೆ ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು. ಸಂಚಾರದಲ್ಲಿ ಎಚ್ಚರಿಕೆಯಿರಲಿ.

ಮಕರ: ಕಾರ್ಯರಂಗದಲ್ಲಿ ಯಶಸ್ಸು. ಪ್ರೀತಿ ಪಾತ್ರರನ್ನು ಭೇಟಿ ಮಾಡುವ ಯೋಗ. ಶುಭ ಕಾರ್ಯಗಳಿಗೆ ಸಿದ್ಧತೆ ನಡೆಸಲಿದ್ದೀರಿ. ಅಲ್ಪ ಕಾಲದ ಹೂಡಿಕೆಗಳಿಂದ ಲಾಭ ಕಂಡುಬಂದೀತು. ಆರೋಗ್ಯದಲ್ಲಿ ಸುಧಾರಣೆ.

ಕುಂಭ: ಉದ್ಯೋಗಸ್ಥರಿಗೆ ನಿಗದಿತ ಸಮಯದಲ್ಲಿ ಕೆಲಸ ಪೂರ್ತಿ ಮಾಡುವ ಧಾವಂತವಿರಲಿದೆ. ದಾಂಪತ್ಯ ಸುಖ ಮಧ‍್ಯಮವಾಗಿರುವುದು. ಮಕ್ಕಳ ವಿಚಾರದಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಿದ್ದೀರಿ.

ಮೀನ: ಪರೋಪಕಾರ ಮಾಡುವ ಅವಕಾಶಗಳು ಕಂಡುಬರಲಿದೆ. ಗೃಹೋಪಯೋಗಿ ವಸ್ತುಗಳ ಖರೀದಿಗೆ ಖರ್ಚು ವೆಚ್ಚವಾಗುವುದು. ತೀರ್ಥ ಕ್ಷೇತ್ರಗಳಿಗೆ ಭೇಟಿ ಕೊಡಲಿದ್ದೀರಿ. ಸಾಲಗಾರರ ಕಾಟದಿಂದ ಮುಕ್ತಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ