ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮಂಗಳವಾರ, 29 ಆಗಸ್ಟ್ 2023 (08:00 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ಉದ್ಯೋಗದಲ್ಲಿರುವ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಲಿದ್ದೀರಿ. ಸಂಗಾತಿಯೊಂದಿಗೆ ನಿಮ್ಮ ಮನದಾಳದ ಆಸೆಯನ್ನು ಹಂಚಿಕೊಳ್ಳಲಿದ್ದೀರಿ. ಮಕ್ಕಳ ವಿಚಾರದಲ್ಲಿ ಕಾಳಜಿ ಅಗತ್ಯ. ಆರ್ಥಿಕವಾಗಿ ಹಣಕಾಸಿನ ಬಗ್ಗೆ ಭವಿಷ್ಯದ ದೃಷ್ಟಿಯಿಂದ ಯೋಜನೆ ರೂಪಿಸುವುರಿ.

ವೃಷಭ: ವೃತ್ತಿರಂಗದಲ್ಲಿ ಹೊಸ ಅವಕಾಶಗಳನ್ನು ಹುಡುಕಿಕೊಂಡು ಹೋಗಲಿದ್ದೀರಿ. ಆರ್ಥಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದೀರಿ. ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಇದು ಸಕಾಲ. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಲಿದ್ದೀರಿ.

ಮಿಥುನ: ನಿಮ್ಮ ಇಚ್ಛೆಯ ಪ್ರಕಾರ ಕೆಲಸ ಕಾರ್ಯಗಳು ನಡೆಯದೇ ಮನಸ್ಸಿಗೆ ಬೇಸರವಾದೀತು. ಕಷ್ಟದ ಸಮಯದಲ್ಲಿ ಮಿತ್ರರ ಸಹಾಯ ಪಡೆಯಲಿದ್ದೀರಿ. ಆರ್ಥಿಕವಾಗಿ ಖರ್ಚು ವೆಚ್ಚಗಳ ಬಗ್ಗೆ ಮಿತಿಯಿರಲಿ. ಅನಿರೀಕ್ಷಿತವಾಗಿ ಕಿರು ಸಂಚಾರ ಮಾಡಬೇಕಾಗುತ್ತದೆ.

ಕರ್ಕಟಕ: ನಿಮ್ಮ ಬಗ್ಗೆ ಬಂಧು ಮಿತ್ರರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಹ ಘಟನೆಗಳಾದೀತು. ವೈವಾಹಿಕ ಪ್ರಸ್ತಾಪಗಳಿಗೆ ಮುನ್ನಡೆ ಸಿಗಲಿದೆ. ಸರಕಾರಿ ಕೆಲಸಗಳಿಗೆ ಓಡಾಟ ನಡೆಸಬೇಕಾಗುತ್ತದೆ. ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಲಭ್ಯವಾಗಲಿದೆ.

ಸಿಂಹ: ದೇವತಾ ಕಾರ್ಯಗಳಿಗೆ ಧನವಿನಿಯೋಗ ಮಾಡಲಿದ್ದೀರಿ. ಪ್ರೀತಿ ಪಾತ್ರರ ಬೇಡಿಕೆಗಳಿಗೆ ಸ್ಪಂದಿಸಲಿದ್ದೀರಿ. ನಾಲಿಗೆ ಚಪಲಕ್ಕೆ ಕಡಿವಾಣ ಹಾಕದೇ ಇದ್ದರೆ ಆರೋಗ್ಯ ಸಮಸ್ಯೆ ಕಂಡುಬಂದೀತು. ಅವಿವಾಹಿತರಿಗೆ ಶೀಘ್ರ ಕಂಕಣ ಬಲ ಕೂಡಿಬರಲಿದೆ.

ಕನ್ಯಾ: ಶ್ರೀದೇವತಾ ಕಾರ್ಯಗಳಿಗೆ ಕಾಲ ಕೂಡಿಬರಲಿದೆ. ಕುಟುಂಬದವರೊಂದಿಗೆ ಸಂತೋಷದ ಕ್ಷಣ ಕಳೆಯಲಿದ್ದೀರಿ. ನಿಮ್ಮ ಕೆಲವೊಂದು ಹೊಸ ನಿರ್ಧಾರಗಳನ್ನು ಬಹಿರಂಗಗೊಳಿಸುವ ಕಾಲ ಬಂದಿದೆ. ಸಂಗಾತಿಯ ಸಹಕಾರದಿಂದ ಅಂದುಕೊಂಡ ಕೆಲಸ ಸುಗಮವಾಗಿ ನೆರವೇರಲಿದೆ.

ತುಲಾ: ನೆರೆಹೊರೆಯವರ ಚಾಡಿ ಮಾತುಗಳು ಮನಸ್ಸಿಗೆ ಬೇಸರವುಂಟು ಮಾಡಲಿದೆ. ಪ್ರತ್ಯಕ್ಷ ಕಂಡರೂ ಪ್ರಾಮಾಣಿಸಿ ನೋಡು ಎನ್ನುವುದನ್ನು ಮರೆಯದಿರಿ. ಅಪರಿಚಿತರನ್ನು ನಂಬಿ ವ್ಯವಹಾರದಲ್ಲಿ ಹೂಡಿಕೆ ಮಾಡಲು ಹೋಗಬೇಡಿ. ದೇವತಾ ಪ್ರಾರ್ಥನೆ ಮರೆಯದಿರಿ.

ವೃಶ್ಚಿಕ: ನಿಮ್ಮ ಸಮೀಪದವರೇ ನಿಮ್ಮ ಮಾತಿಗೆ ಬೆಲೆಕೊಡದಿದ್ದಾಗ ಬೇಸರವಾಗುವುದು ಸಹಜ. ಆದರೆ ಎಲ್ಲವನ್ನೂ ಆತ್ಮಸ್ಥೈರ್ಯದಿಂದ ಎದುರಿಸುವುದು ಅಗತ್ಯ.  ಎಷ್ಟೇ ತೊಂದರೆಯಾದರೂ ಸಂಗಾತಿಯ ಸಹಕಾರವಿರುವುದರಿಂದ ಮನಸ್ಸಿಗೆ ಧೈರ್ಯ ಬರಲಿದೆ.

ಧನು: ವೃತ್ತಿರಂಗದಲ್ಲಿ ಸ್ಥಾನಪಲ್ಲಟ ಭೀತಿಯಿದೆ. ಆರ್ಥಿಕವಾಗಿ ಖರ್ಚು ವೆಚ್ಚಗಳನ್ನು ನಿಭಾಯಿಸಲು ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ವೈಯಕ್ತಿಕ ಆರೋಗ್ಯದ ಬಗ್ಗೆ ಉಪೇಕ್ಷೆ ಬೇಡ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.

ಮಕರ: ಆಗಾಗ ಆರ್ಥಿಕವಾಗಿ ಏರುಪೇರಾಗುವ ಸಾಧ್ಯತೆಯಿದೆ. ಎಲ್ಲದಕ್ಕೂ ಸಿದ್ಧರಾಗಿರಬೇಕು. ಹಿತಶತ್ರುಗಳ ಕಾಟದಿಂದ ಸಣ್ಣ ಪುಟ್ಟ ತೊಂದರೆಗಳು ಎದುರಾದೀತು. ಸಾಂಸಾರಿಕವಾಗಿ ಮನದೆನ್ನೆಯ ಮಾತುಗಳಿಗೆ ಬೆಲೆ ಕೊಡಲೇಬೇಕಾಗುತ್ತದೆ.

ಕುಂಭ: ಆರ್ಥಿಕವಾಗಿ ನಾನಾ ಖರ್ಚು ವೆಚ್ಚಗಳು ಎದುರಾಗಲಿವೆ. ಕೌಟುಂಬಿಕ ಸಮಸ್ಯೆಗಳನ್ನು ನಾಜೂಕಾಗಿ ಬಗೆಹರಿಸಿಕೊಳ್ಳಿ. ಮಹಿಳೆಯರಿಗೆ ಗೃಹಕೃತ್ಯಗಳಿಂದ ದೇಹ ಹೈರಾಣಾಗುವುದು. ಯೋಗ್ಯ ವಯಸ್ಕರಿಗೆ ಮನಸ್ಸಿಗೆ ಹಿಡಿಸಿದ ಸಂಬಂಧಗಳು ಕೂಡಿಬರಲಿದೆ.

ಮೀನ: ನೂತನ ದಂಪತಿಗಳಿಗೆ ಶೀಘ‍್ರದಲ್ಲೇ ಸಂತಾನ ಫಲ ಯೋಗವಿದೆ. ಬೇಡದ ವಿಚಾರಗಳಿಗೆ ತಲೆಕೆಡಿಸಿಕೊಂಡು ಮನಸ್ಸು ಹಾಳು ಮಾಡಿಕೊಳ್ಳಬೇಡಿ. ಆರ್ಥಿಕವಾಗಿ ಧನಾದಾಯ ಉತ್ತಮವಾಗಿರಲಿದೆ. ಸದ್ಯದಲ್ಲೇ ವಾಹನ ಖರೀದಿ ಯೋಗವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ