ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಗುರುವಾರ, 21 ಸೆಪ್ಟಂಬರ್ 2023 (08:20 IST)
ಬೆಂಗಳೂರು: ಇಂದಿನ ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ದೇಹಾರೋಗ್ಯದ ಬಗ್ಗೆ ಚಿಂತೆಯಾದೀತು. ವಿದ್ಯಾರ್ಥಿಗಳಿಗೆ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಕಂಡುಬರಲಿದೆ. ಭೂಮ್ಯಾದಿ ವ್ಯವಹಾರಗಳ ಲೆಕ್ಕ ಪತ್ರಗಳ ಬಗ್ಗೆ ನಿಗಾ ಇರಲಿ. ದೇವತಾ ಪ್ರಾರ್ಥನೆ ಮಾಡಿ.

ವೃಷಭ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಕಂಕಣ ಬಲ ಕೂಡಿಬರಲಿದೆ. ಮನಸ್ಸಿನಲ್ಲಿರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಲಿದ್ದೀರಿ. ವ್ಯಾಪಾರಿಗಳಿಗೆ ಆದಾಯ ವೃದ್ಧಿ.

ಮಿಥುನ: ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿದ್ದರೆ ಯಶಸ್ಸು ಸಿಗಲಿದೆ. ಹಳೆಯ ಮಿತ್ರರನ್ನು ಭೇಟಿಯಾಗುವ ಯೋಗ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕೆ ಅವಕಾಶಗಳು ಕಂಡುಬರಲಿದೆ. ಆರೋಗ್ಯದಲ್ಲಿ ಸುಧಾರಣೆ.

ಕರ್ಕಟಕ: ಹೊಸದಾಗಿ ಕೆಲಸಕ್ಕೆ ಸೇರಿಕೊಂಡವರಿಗೆ ತಕ್ಕಮಟ್ಟಿನ ಯಶಸ್ಸು ಸಿಗಲಿದೆ. ಹಣಕಾಸಿನ ವಿಚಾರದಲ್ಲಿ ಇನ್ನೊಬ್ಬರು ಹಸ್ತಕ್ಷೇಪ ಮಾಡದಂತೆ ಎಚ್ಚರಿಕೆ ವಹಿಸಿ. ದಾಂಪತ್ಯದಲ್ಲಿ ಸುಖ, ಸಮೃದ್ಧಿಯಿರಲಿದೆ.

ಸಿಂಹ: ಸ್ಥಿರ ಉದ್ಯೋಗಕ್ಕಾಗಿ ನಿಮ್ಮ ಪ್ರಯತ್ನ ಮುಂದುವರಿಯಲಿದೆ. ಆಹಾರೋದ್ಯಮಿಗಳಿಗೆ ಮುನ್ನಡೆ. ಕೃಷಿ ಸಂಬಂಧಿತ ವಸ್ತುಗಳ ವ್ಯವಹಾರ ಮಾಡುವವರಿಗೆ ಮುನ್ನಡೆ. ದೂರ ಸಂಚಾರಕ್ಕೆ ಸಿದ್ಧತೆ ನಡೆಸಲಿದ್ದೀರಿ.

ಕನ್ಯಾ: ಹೊಸ ವಾಹನ ಖರೀದಿಗೆ ಕಾಲ ಕೂಡಿಬರಲಿದೆ. ಯಂತ್ರೋಪಕರಣಗಳ ಜೊತೆ ಕೆಲಸ ಮಾಡುವಾಗ ಎಚ್ಚರಿಕೆಯಿರಲಿ. ಸರಕಾರೀ ವೃತ್ತಿಯವರಿಗೆ ಕಾರ್ಯದೊತ್ತಡ ಕಂಡುಬರಲಿದೆ. ಸಮಯದ ಸದುಪಯೋಗ ಮಾಡಿಕೊಳ್ಳಲಿದ್ದೀರಿ.

ತುಲಾ: ಹಿಂದೆ ಮಾಡಿದ ಒಳ್ಳೆಯ ಕೆಲಸಗಳಿಗೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ಹಣಕಾಸಿನ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ ಕಂಡುಬರಲಿದೆ. ತಾಂತ್ರಿಕ ವೃತ್ತಿಯವರಿಗೆ ಮುನ್ನಡೆ. ದಿನದಂತ್ಯಕ್ಕೆ ನೆಮ್ಮದಿ.

ವೃಶ್ಚಿಕ: ದೇವತಾರಾಧನೆಯಲ್ಲಿ ಆಸಕ್ತಿ ಹೆಚ್ಚಾಗಲಿದೆ. ಕೆಲಸದ ವಿಚಾರದಲ್ಲಿ ಪರರ ಮೇಲೆ ಅತಿಯಾದ ಅವಲಂಬನೆ ಬೇಡ. ಅವಿವಾಹಿತರಿಗೆ ಸೂಕ್ತ ವೈವಾಹಿಕ ನೆಂಟಸ್ಥಿಕೆ ಕೂಡಿಬರಲಿದೆ. ಕೋರ್ಟು ಕಚೇರಿ ಕೆಲಸಗಳಲ್ಲಿ ಮುನ್ನಡೆ.

ಧನು: ದೂರದಲ್ಲಿರುವ ಬಂಧು ವರ್ಗದವರನ್ನು ಭೇಟಿಯಾಗುವ ಯೋಗ. ವಸ್ತ್ರೋದ್ಯಮಿಗಳಿಗೆ ನಿವ್ವಳ ಲಾಭವಾಗಲಿದೆ. ಮನೆಗೆ ಅಪರೂಪದ ಅತಿಥಿಗಳ ಆಗಮನವಾಗಲಿದೆ. ನೆರೆಹೊರೆಯವರ ಸಹಾಯ ಸಿಗಲಿದೆ.

ಮಕರ: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳಿಂದ ಒತ್ತಡ ಕಂಡುಬರಲಿದೆ. ಉದ್ಯೋಗಸ್ಥರಿಗೆ ಸಮಯದ ಅಭಾವ ಕಂಡುಬಂದೀತು. ಮಕ್ಕಳ ಭವಿಷ್ಯದ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ.

ಕುಂಭ: ಮನೆಯಲ್ಲಿ ಶುಭ ಮಂಗಲ ಕಾರ್ಯ ನೆರವೇರಿಸಲು ಸಿದ್ಧತೆ ನಡೆಸಲಿದ್ದೀರಿ. ಸಿದ್ಧ ಉಡುಪು ಮಾರಾಟಗಾರರಿಗೆ ಲಾಭವಾಗಲಿದೆ. ಹಿರಿಯರಿಗೆ ದೇವತಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದು.

ಮೀನ: ಕೌಟುಂಬಿಕವಾಗಿ ಸುಖ,ಸಮೃದ್ಧಿ ಕಂಡುಬರಲಿದೆ. ಗೃಹಿಣಿಯರಿಗೆ ಮನೆ ಕೆಲಸಗಳಿಂದ ಕೊಂಚ ಬಿಡುವು ಸಿಗಲಿದೆ. ವೈದ್ಯ ವೃತ್ತಿಯವರಿಗೆ ಬಿಡುವಿಲ್ಲದ ಕೆಲಸ. ಹಿರಿಯರ ಸಲಹೆಗಳನ್ನು ಪಾಲಿಸುವುದು ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ