ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

Krishnaveni K

ಗುರುವಾರ, 22 ಫೆಬ್ರವರಿ 2024 (08:06 IST)
ಬೆಂಗಳೂರು: ಇಂದಿನ  ದಿನದ ದ್ವಾದಶ ರಾಶಿ ಫಲ ಹೀಗಿದೆ ನೋಡಿ.

ಮೇಷ: ವ್ಯವಹಾರ ನಿಮಿತ್ತವಾಗಿ ಅನ್ಯರೊಂದಿಗೆ ಕಿರಿ ಕಿರಿಯಾದೀತು. ಹೊಸ ವಿಚಾರಗಳನ್ನು ನಿಮ್ಮ ಕೆಲಸಗಳಲ್ಲಿ ಅಳವಡಿಸಿಕೊಳ್ಳಲಿದ್ದೀರಿ. ಹಣಕಾಸಿನ ಲೆಕ್ಕಾಚಾರಗಳು ಪಕ್ಕಾ ಆಗಿರಲಿ. ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ.

ವೃಷಭ: ಉದ್ಯೋಗ ಕ್ಷೇತ್ರದಲ್ಲಿ ನಿಮಗಿಂತ ಬಲಿಷ್ಠರಾದವರನ್ನು ಹಿಂದಿಕ್ಕುವ ಉತ್ಸಾಹ ಕಂಡುಬಂದೀತು. ಉದರ ಸಂಬಂಧೀ ಅನಾರೋಗ್ಯ ಸಮಸ್ಯೆಗಳನ್ನು ಅವಗಣಿಸದಿರಿ. ಕೌಟುಂಬಿಕವಾಗಿ ಬಂಧು ಮಿತ್ರರ ಆಗಮನ ಸಂತೋಷ ಕೊಡಲಿದೆ.

ಮಿಥುನ: ಆರಂಭದಲ್ಲಿ ಇದ್ದ ಉತ್ಸಾಹ ಕರಗಿ ಹೋಗಲಿದೆ. ಆತ್ಮವಿಶ್ವಾಸ, ತಾಳ್ಮೆಯಿದ್ದರೆ ಮಾತ್ರ ಜಯ ಸಾಧ್ಯ. ಪರಂಪರಾಗತವಾಗಿ ಬಂದ ಕೆಲಸ, ಹೊಣೆಗಾರಿಕೆ ಮುಂದುವರಿಸುವ ಜವಾಬ್ಧಾರಿ ನಿಮ್ಮದಾಗಲಿದೆ.

ಕರ್ಕಟಕ:  ನಿಮ್ಮ ಕಾರ್ಯವ್ಯಾಪ್ತಿ ಮೀರಿ ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. ಕೆಲಸ ಕಾರ್ಯಗಳಲ್ಲಿ ನಿಮ್ಮ ಚುರುಕುತನ ಇತರರಿಗೂ ಇಷ್ಟವಾಗಲಿದೆ. ದೇವತಾ ಕಾರ್ಯಗಳಲ್ಲಿ ಭಾಗಿಯಾಗುವುದರಿಂದ ಮನಸ್ಸಿಗೆ ನೆಮ್ಮದಿಯಾಗಲಿದೆ.

ಸಿಂಹ: ವಹಿಸಿಕೊಂಡಿದ್ದ ಕೆಲಸಗಳನ್ನು ಸೂಕ್ತ ಸಮಯಕ್ಕೆ ಪೂರ್ತಿ ಮಾಡಿದ ತೃಪ್ತಿ ನಿಮ್ಮದಾಗಲಿದೆ. ವ್ಯಾವಹಾರಿಕವಾಗಿ ನಿಮ್ಮ ಏಳಿಗೆ ಎದುರಾಳಿಗಳಿಗೂ ಅಸೂಯೆ ತರಲಿದೆ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ.

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ದಿಕ್ಕುತಪ್ಪಿಸುವ ಕೆಲಸಗಳಾದೀತು. ಕ್ರಿಯಾತ್ಮಕವಾಗಿ ಯೋಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬೇಕಾಗುತ್ತದೆ. ಎದುರಾಳಿಗಳ ನಯ ಮಾತುಗಳಿಗೆ ಮರುಳಾಗದಿರಿ. ಎಚ್ಚರಿಕೆಯಿರಲಿ.

ತುಲಾ: ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ನಿಮ್ಮ ಗುಣ ಮೆಚ್ಚುಗೆಗೆ ಪಾತ್ರವಾಗಲಿದೆ. ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಕಂಡುಬರುವುದು. ಕೆಳಹಂತದ ನೌಕರರಿಗೆ ಉದ್ಯೋಗ ಬದಲಾವಣೆ ಮಾಡುವ ಯೋಜನೆಗಳು ಬರಲಿವೆ.

ವೃಶ್ಚಿಕ: ನಿಮ್ಮನ್ನು ಮೂಲೆಗುಂಪು ಮಾಡುವ ಜನರಿರುತ್ತಾರೆ. ಎಚ್ಚರಿಕೆಯಿಂದ ಮುಂದಡಿಯಿಡಬೇಕು. ಹಿತಶತ್ರುಗಳ ಹುನ್ನಾರಗಳು ಬೆಳಕಿಗೆ ಬರಲಿವೆ. ಮಹಿಳೆಯರಿಗೆ ತವರಿನ ಕಡೆಯವರ ಭೇಟಿಯಿಂದ ಸಂತೋಷವಾಗಲಿದೆ.

ಧನು: ಆರ್ಥಿಕವಾಗಿ ಅನುಕೂಲಕ್ಕೆ ಕೊರತೆಯಿರದು. ಆದರೆ ನಿಮ್ಮನ್ನು ಯಾರೂ ಪರಿಗಣಿಸುತ್ತಿಲ್ಲ ಎಂಬ ಭಾವ ಕಾಡಲಿದೆ. ಅಚಾತುರ್ಯಕ್ಕೆ ಅವಕಾಶ ಮಾಡಿಕೊಡದಿರಿ. ಸಂಗಾತಿಯ ದೇಹಾರೋಗ್ಯದ ಬಗ್ಗೆ ಗಮನಕೊಡಿ.

ಮಕರ: ಯೋಗ್ಯ ವಯಸ್ಕರಿಗೆ ಶೀಘ್ರದಲ್ಲೇ ಉತ್ತಮ ವೈವಾಹಿಕ ಸಂಬಂದಗಳು ಕುದುರಲಿವೆ. ನಿಮ್ಮ ಮಾತಿನಿಂದ ಇಕ್ಕಟ್ಟಿಗೆ ಸಿಲುಕುವ ಪ್ರಸಂಗಗಳು ಎದುರಾದೀತು. ಹಿರಿಯರಿಗೆ ಧಾರ್ಮಿಕ ಕೆಲಸಗಳಲ್ಲಿ ಶ್ರದ್ಧೆ ಮೂಡಲಿದೆ.

ಕುಂಭ: ಬೆನ್ನ ಹಿಂದೆ ನಿಂತು ಕೊಂಕು ಮಾತನಾಡುವವರ ವಿರುದ್ಧ ತಿರುಗಿ ಬೀಳಲಿದ್ದೀರಿ. ಯಾವುದೇ ಫಲಾಪೇಕ್ಷೆಯಿಲ್ಲದೇ ಮಾಡುವ ಕೆಲಸಗಳಿಂದ ನೆಮ್ಮದಿ ಸಿಗುವುದು. ಗೃಹೋಪಯೋಗಿ ವಸ್ತುಗಳ ಖರೀದಿ ಮಾಡಲಿದ್ದೀರಿ.

ಮೀನ: ಸಾಲಗಾರರ ಕಾಟದಿಂದ ಮುಕ್ತಿ ಸಿಗಲಿದ್ದು, ಆರ್ಥಿಕವಾಗಿ ಚೇತರಿಕೆ ಕಂಡುಬರಲಿದೆ. ವೈಯಕ್ತಿಕವಾಗಿ ಕೆಲವೊಂದು ಗುಟ್ಟುಗಳನ್ನು ನಿಮ್ಮಲ್ಲೇ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಾಗಲಿದೆ. ಕಿರು ಸಂಚಾರ ಮಾಡಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ