ನಾಗರಪಂಚಮಿ ದಿನ ಈ ಕೆಲಸ ನಿಷಿದ್ಧ!

ಶುಕ್ರವಾರ, 13 ಆಗಸ್ಟ್ 2021 (09:18 IST)
ಬೆಂಗಳೂರು: ಇಂದು ಎಲ್ಲೆಡೆ ನಾಗರಪಂಚಮಿ ಹಬ್ಬ ಆಚರಿಸಲಾಗುತ್ತಿದೆ. ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮೀ ತಿಥಿಯನ್ನು ನಾಗರಪಂಚಮಿ ಆಚರಿಸಲಾಗುತ್ತದೆ.


ನಾಗರ ಪಂಚಮಿ ನಾಗಗಳನ್ನು ಪೂಜಿಸುವ ಒಂದು ದಿನ. ನಾಗನಿಗೆ ತನಿ ಎರೆದು ಎಲ್ಲರ ಮನೆಯಲ್ಲಿ ಕಾಯಿ ಕಡುಬು ಉದ್ದಿನ ಕಡುಬು ಮಾಡಿ ದೇವರಿಗೆ ನೈವೇದ್ಯ ಮಾಡುವ ಪದ್ಧತಿಯಿದೆ.

ಆದರೆ ಈ ದಿನ ಹುರಿಯುವುದು, ಹಂಚಿನಲ್ಲಿ ಹೋಳಿಗೆ ಮಾಡುವುದು, ಭೂಮಿ ಅಗೆಯುವುದು, ಬೀಜ ಬಿತ್ತುವುದು, ಪಡವಲಕಾಯಿ ತುಂಡರಿಸುವುದು ಮತ್ತು ನಾಗಾಕೃತಿಯುಳ್ಳ ವಸ್ತುಗಳನ್ನು ತುಂಡರಿಸುವುದು ನಿಷಿದ್ಧವಾಗಿದೆ. ನಾಗನಿಗೆ ಹಾಲೆರೆಯುವುದು ವಿಶೇಷವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ