ನೈವೇದ್ಯ ಮಾಡುವಾಗ ದೇವರಿಗೆ ಈ ವಿಚಾರಗಳು ನಿಷಿದ್ಧ

ಗುರುವಾರ, 8 ಸೆಪ್ಟಂಬರ್ 2022 (08:20 IST)
ಬೆಂಗಳೂರು: ದೇವಾಲಯದಲ್ಲಿ ಅಥವಾ ಮನೆಯಲ್ಲಿ ಪೂಜೆ ಮಾಡುವಾಗ ನೈವೇದ್ಯ ಮಾಡುವ ವೇಳೆ ಈ ಕೆಲವೊಂದು ಕೆಲಸ ಮಾಡುವುದು ನಿಷಿದ್ಧ. ಅವು ಯಾವುವು ನೋಡೋಣ.

ಘಂಟಾನಾದಂ ತಥಾ ವಾದ್ಯಂ ನಮಸ್ಕಾರಂ ಪ್ರದಕ್ಷಿಣಮ್. ಗಾಂಧರ್ವ ನೃತ್ಯಗೀತಂ ಚ ಶ್ರುತಿ ಪಾಠ ಚ ಭಾಷಣಮ್. ನೈವೇದ್ಯಕಾಲೇ ಯಃ ಕುರ್ಯಾತ್ ರೌರವಂ ನರಕ ವ್ರಜೇತ್ ಎಂಬ ಮಾತಿದೆ.

ಅದರಂತೆ ದೇವರಿಗೆ ನೈವೇದ್ಯ ಮಾಡುವಾಗ ಘಂಟಾ ನಾದ ಮಾಡುವುದು, ವಾದ್ಯ ಮೊಳಗಿಸುವುದು, ಪ್ರದಕ್ಷಿಣೆ ಹಾಕುವುದು, ನೃತ್ಯ, ಸಂಗೀತ ಹಾಡುವುದು ಮಾಡುವುದು ಮಹಾ ಪಾಪವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ