ಪ್ರಯಾಣಕ್ಕೆ ಮೊದಲು ಇವುಗಳನ್ನು ಕಂಡರೆ ಶುಭ ಫಲ

ಶುಕ್ರವಾರ, 17 ಮೇ 2019 (08:04 IST)
ಬೆಂಗಳೂರು: ಲೋಕದಲ್ಲಿ ಸಾಮಾನ್ಯವಾಗಿ ಜನರು ಪ್ರಯಾಣ ಅಥವಾ ಶುಭಕಾರ್ಯಲ್ಲಿ ಜನರು ಶಕುನಗಳನ್ನು ನೋಡಿ ನಡೆಯುವ ಪದ್ಧತಿಯಿದೆ. ಪ್ರಯಾಣ ವೇಳೆ ಯಾವ ಶಕುನಗಳು ಕಂಡರೆ ಶುಭ ಎಂದು ಇಂದು ನೋಡೋಣ.


ಕನ್ಯೆಯರು, ಗೋವು, ಹಣ್ಣು, ಸಂಗೀತ ವಾದ್ಯ, ಘಂಟಾಧ್ವನಿ, ಮೊಸರು, ಅರಸಿನ, ಕುಂಕುಮ, ಹೂವು, ಕನ್ನಡಿ, ಚಂದ್ರೋದಯ, ಬೆಂಕಿಯಿಲ್ಲದೆ ಎತ್ತಿಕೊಂಡು ಬರುವ ಹೆಣ, ತಿಂಡಿ ತೀರ್ಥ, ಹಾಲು ತುಂಬಿದ ಪಾತ್ರೆ, ಪ್ರಿಯವಾದ ಮಾತು, ಎತ್ತು, ಬ್ರಾಹ್ಮಣ ಜೋಡಿ, ಗರುಡ, ಪ್ರಯಾಣಿಕರಿಗೆ ಮೃಗಗಳ ಪ್ರದಕ್ಷಿಣೆ, ತಾಂಬೂಲ, ವೀಳ್ಯದೆಲೆ, ಪುರುಷರಿಗೆ ಬಲಭಾಗ ಅದುರುವುದು, ಸ್ತ್ರೀಯರಿಗೆ ಎಡಭಾಗ ಅದುರುವುದು ಇತ್ಯಾದಿಗಳು ಎದುರಾದರೆ ಶುಭ ಫಲ. ಇವುಗಳಿಂದ ಪ್ರಯಾಣದಲ್ಲಿ ಸಕಲಾಭೀಷ್ಟಗಳು ನೆರವೇರುತ್ತವೆ ಎಂಬ ನಂಬಿಕೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ