ಶ್ರೀಕೃಷ್ಣ ದೇವರು ತನ್ನ ಶರೀರವನ್ನು ತ್ಯಜಿಸಿದ್ದು ಎಲ್ಲಿ ಗೊತ್ತಾ?

ಗುರುವಾರ, 25 ಏಪ್ರಿಲ್ 2019 (07:06 IST)
ಬೆಂಗಳೂರು: ಗುಜರಾತ್ ನಲ್ಲಿರುವ ಸೋಮನಾಥ ಮಂದಿರವು ದೇಶದಲ್ಲಿ ಒಂದು ಪ್ರಮುಖ ತೀರ್ಥ ಸ್ಥಳವಾಗಿದೆ. ಇದು ಕೇವಲ ಶಿವನಿಗೆ ಸಂಬಂಧಿಸಿದ ಕ್ಷೇತ್ರವಲ್ಲ, ಶ್ರೀಕೃಷ್ಣನಿಗೂ ಮಹತ್ವದ್ದಾಗಿದೆ.


ಬಾಲ್ಕಾ ತೀರ್ಥ
ಸೋಮನಾಥ ಮಂದಿರದಿಂದ 4 ಕಿ.ಮೀ. ದೂರದಲ್ಲಿ ಬಾಲ್ಕಾ ತೀರ್ಥವಿದೆ. ಶ್ರೀಕೃಷ್ಣ ತನ್ನ ಶರೀರ ತ್ಯಜಿಸಿದ್ದು ಇದೇ ಸ್ಥಳದಿಂದ ಎನ್ನಲಾಗಿದೆ. ಬಾಲ್ಕಾದ ಒಂದು ಆಲದ ಮರದ ಅಡಿಯಲ್ಲಿ ಶ್ರೀಕೃಷ್ಣ ವಿಶ್ರಮಿಸುತ್ತಿದ್ದಾಗ ಬೇಟೆಗಾರನೊಬ್ಬ ಕೃಷ್ಣನ ಕಾಲನ್ನು ಜಿಂಕೆಯ ಕಣ್ಣು ಎಂದು ತಪ್ಪಾಗಿ ತಿಳಿದು ಬಾಣ ಬಿಡುತ್ತಾನೆ. ಇದು ಕೃಷ್ಣನ ಕಾಲಿಗೆ ತಗಲುತ್ತದೆ. ಬೇಟೆಗಾರ ತನ್ನ ತಪ್ಪಿಗೆ ಕ್ಷಮೆ ಕೋರುತ್ತಾನೆ.

ಆದರೆ ಅವನನ್ನು ಸಮಾಧಾನಿಸುವ ಕೃಷ್ಣ ಹಿಂದಿನ ಜನ್ಮದಲ್ಲಿ ನೀನು ವಾಲಿಯಾಗಿದ್ದೆ. ನಿನ್ನನ್ನು ನಾನು ಮೋಸದಿಂದ ಕೊಂದಿದ್ದೆ. ಆ ತಪ್ಪಿಗೆ ಈಗ ನಿನ್ನ ಕೈಯಲ್ಲಿ ಸಾವನ್ನಪ್ಪಿದೆ ಎಂದು ಭೂಮಿಯಲ್ಲಿ ಶರೀರ ತ್ಯಜಿಸಿ ಗೋಲಾಕ್ ಧಾಮ್ ಗೆ ತೆರಳುತ್ತಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ