ಬೆಂಗಳೂರು: ತಂದೆ-ತಾಯಿ ಎಂದರೆ ಪ್ರತ್ಯಕ್ಷ ಕಾಣುವ ದೇವರು. ಈ ದೇವರಿಗೆ ನೋವು ಮಾಡಿದರೆ ನಮಗೆ ಆ ಶಾಪ ತಟ್ಟದೇ ಇರುವುದಿಲ್ಲ.
ಮಾತಾ ಪಿತೃಗಳ ಶಾಪ ಯಾವೆಲ್ಲಾ ಸಂದರ್ಭದಲ್ಲಿ ನಮ್ಮನ್ನು ತಟ್ಟುತ್ತದೆ ನೋಡೋಣ. ತಂದೆ-ತಾಯಿಗಳ ಮನ ನೋಯಿಸುವ ಮಾತನಾಡುವುದು, ಮನೆಯಿಂದ ಹೊರ ಹಾಕುವುದು, ಅವರನ್ನು ವೃದ್ಧಾಪ್ಯ ಕಾಲದಲ್ಲಿ ನೋಡಿಕೊಳ್ಳದೇ ಇರುವುದು, ಅಂತಿಮ ಕಾರ್ಯ, ಶ್ರಾದ್ಧ ಕಾರ್ಯಗಳನ್ನು ಮಾಡದೇ ಇರುವುದರಿಂದ ಮಾತಾ-ಪಿತೃಗಳ ಶಾಪ ಮಕ್ಕಳಿಗೆ ತಗುಲಬಹುದು.
ಹೀಗಿದ್ದಲ್ಲಿ ಮಕ್ಕಳ ಜೀವನದಲ್ಲಿ ಏಳಿಗೆ ಕಾಣದೇ ಇರುವುದು, ತಲೆಮಾರುಗಳಿಗೆ ಮಕ್ಕಳಾಗದೇ ಇರುವುದು, ನೆಮ್ಮದಿ ಇರದ ದಾರಿದ್ರ್ಯ ಜೀವನ ಅಂತಹ ಮಕ್ಕಳು ಎದುರಿಸಬೇಕಾಗಬಹುದು.