ಶನಿದೋಷ ನಿವಾರಣೆಗೆ ಹೀಗೆ ಮಾಡಿ

ಭಾನುವಾರ, 5 ಡಿಸೆಂಬರ್ 2021 (08:50 IST)
ಬೆಂಗಳೂರು: ಶನಿದೋಷ ಎನ್ನುವುದು ಕೆಲವರನ್ನು ಬಿಟ್ಟೂ ಬಿಡದಂತೆ ಕಾಡುತ್ತದೆ. ಇದರಿಂದ ಅನೇಕ ಕಷ್ಟ-ನಷ್ಟಗಳು ಸಂಭವಿಸುತ್ತವೆ. ಹಾಗಿದ್ದರೆ ಶನಿದೋಷ ನಿವಾರಣೆಗೆ ಏನು ಮಾಡಬೇಕು?

ಶನಿ ದೇವರನ್ನು ಸಂತೃಪ್ತಗೊಳಿಸಲು ಶನಿವಾರವೇ ಸೂಕ್ತ. ಈ ದಿನ ಶನಿದೇವರ ಪೂಜೆ ಮಾಡಿದರೆ ಒಳ್ಳೆಯದು.  ಅದರಲ್ಲೂ ಶನಿ ಅಮವಾಸ್ಯೆಯಂದು ಸ್ನಾನ ಮಾಡಿ ಶುದ್ಧರಾದ ಬಳಿಕ ದಾನ ಮಾಡಬೇಕು.

ಶನಿ ಅಮವಾಸ್ಯೆಯಂದು ಸ್ನಾನ ಮಾಡಿ ಉಪವಾಸವಿದ್ದು, ಸಾಸಿವೆ ಎಣ್ಣೆ ಮತ್ತು ಕಪ್ಪು ಎಳ್ಳಿನೊಂದಿಗೆ ಶನಿದೇವರ ಪೂಜೆ ಮಾಡಬೇಕು. ಶನಿ ದೇವಸ್ಥಾನದಲ್ಲಿರುವ ಅರಳಿ ಮರಕ್ಕೆ ನೀರು ಅರ್ಪಿಸಬೇಕು. ನಂತರ ಸಾಸಿವೆ ಎಣ್ಣೆಯಿಂದ ತಯಾರಿಸಿದ ಆಹಾರವನ್ನು ಕಾಗೆ ಅಥವಾ ನಾಯಿಗೆ ಹಾಕುವುದರಿಂದ ಶನಿದೋಷವನ್ನು ಆದಷ್ಟು ಕಡಿಮೆ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ