ದೇವರ ದರ್ಶನ ಹೇಗೆ ಪಡೆಯಬೇಕು?

ಬುಧವಾರ, 10 ಏಪ್ರಿಲ್ 2019 (07:16 IST)
ಬೆಂಗಳೂರು: ಯಾವುದಾದರೂ ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನ ಹೇಗೆ ಪಡೆಯಬೇಕು ಎನ್ನುವುದಕ್ಕೆ ನಮ್ಮ ಪೂರ್ವಜರು ಕೆಲವೊಂದು ನಿಯಮ ರೂಪಿಸಿದ್ದಾರೆ. ಅದರಂತೆ ನಡೆದರೆ ನಮಗೆ ದೇವರ ದರ್ಶನ ಫಲ ಸಿಗುವುದು.


ಯಾವುದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವನಿಂದ ತತ್ವ ಉಪದೇಶಿಸು, ವೈಕುಂಠಕ್ಕೆ ಕರೆದೊಯ್ದು ನಿನ್ನ ದರ್ಶನ ಮಾಡಿಸು ಎಂದು ಪ್ರಾರ್ಥಿಸಬೇಕು.

ನಂತರ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕು. ಅದಕ್ಕೆ ಧೂಳಿ ದರ್ಶನ ಎನ್ನುತ್ತಾರೆ. ಧೂಳಿದರ್ಶನಂ ಪಾಪನಾಶನಂ ಎಂದರೆ ಪಾಪ ನಾಶವಾಗುತ್ತದೆ.

ನಂತರ ದೇವಾಲಯದ ಒಳಗೆ ಹೋಗುವಾಗ ಕೈಕಾಲುಗಳನ್ನು ತೊಳೆದು ಪ್ರವೇಶ ಮಾಡಿ. ಆದರೆ ತಕ್ಷಣವೇ ವಿಗ್ರಹವನ್ನು ನೋಡಬೇಡಿ. ಅದಕ್ಕೂ ಒಂದು ಕ್ರಮವಿದೆ. ಮೊದಲು ಪಾದ ದರ್ಶನ ಮಾಡಿ. ನಂತರ ಕಟಿ ದರ್ಶನ, ನಂತರ ನಾಭಿ, ತದನಂತರ ಕಂಠ, ಅದಾದ ಬಳಿಕ ಮುಖ ದರ್ಶನ, ಕಿರೀಟ ದರ್ಶನ ಮಾಡಬೇಕು. ಸರ್ವಾಂಗ ದರ್ಶನ ಮಾಡಿ ದೇವರಲ್ಲಿ ನಿಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ