ಕುಂಕುಮಾರ್ಚನೆ ಮಾಡುವುದು ಯಾಕಾಗಿ ಗೊತ್ತಾ?

ಮಂಗಳವಾರ, 18 ಜೂನ್ 2019 (08:38 IST)
ಬೆಂಗಳೂರು: ಶ್ರೀದೇವಿಯ ಪೂಜೆ ಮಾಡುವಾಗ ಪ್ರಮುಖವಾಗಿ ಮಾಡುವ ಪೂಜೆಯೆಂದರೆ ಕುಂಕುಮಾರ್ಚನೆ. ದೇವಿಗೂ ಕುಂಕುಮಕ್ಕೂ ಏನು ಅಷ್ಟೊಂದು ಮಹತ್ವ ಎಂದು ನಿಮಗೆ ಗೊತ್ತಾ?


ಶ್ರೀದೇವಿಯ ಪೂಜೆಯಲ್ಲಿ ಕುಂಕುಮಾರ್ಚನೆ ಪ್ರಮುಖವಾಗಿದ್ದು ಅನಾದಿ ಕಾಲದಿಂದಲೂ ಈ ಆಚರಣೆಯಿದೆ. ದೇವಿ ಅರ್ಚನಾ ಪ್ರಿಯೆ. ಅಲಂಕಾರ ಪ್ರಿಯೆ. ಕುಂಕುಮ ಎನ್ನುವುದು ಸೌಭಾಗ್ಯದ ಪ್ರತೀಕ.

ಹೀಗಾಗಿ ಶುಕ್ರವಾರಗಳಂದು ದೇವಿಯ ನಾಮಸ್ಮರಣೆ ಮಾಡುತ್ತಾ ಒಂದೊಂದು ಚಿಟಿಕಿಯಂತೆ ಕುಂಕುಮಾರ್ಚನೆ ಮಾಡುತ್ತಾ ಪೂಜಿಸಿದರೆ ಮನೆಯಲ್ಲಿ ಸಕಲ ಸೌಭಾಗ್ಯಗಳು ತುಂಬಿ ತುಳುಕುತ್ತವೆ. ದೇವಿಯ ಅನುಗ್ರಹಕ್ಕೆ ಪಾತ್ರವಾಗಿ ಮುತ್ತೈದೆತನ ಸುದೀರ್ಘಕಾಲ ಬರುವುದು ಎಂಬ ನಂಬಿಕೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ