ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ

ಗುರುವಾರ, 1 ಆಗಸ್ಟ್ 2019 (09:07 IST)
ಬೆಂಗಳೂರು: ದ್ವಾದಶ ರಾಶಿಗಳ ಇಂದಿನ ಫಲಾಫಲಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.


ಮೇಷ: ಹಣಕಾಸಿನ ಸಂಪಾದನೆಗೆ ನಾನಾ ಮಾರ್ಗಗಳು ಗೋಚರವಾಗಲಿದೆ. ಬಹುದಿನಗಳ ಕನಸು ಈಡೇರಿಸಲು ಮುಂದಾಗುವಿರಿ. ಸಾಂಸಾರಿಕವಾಗಿ  ಸಂಗಾತಿಯ ಅಭಿಪ್ರಾಯಗಳಿಗೂ ಕಿವಿಗೊಡಬೇಕಾಗುತ್ತದೆ.

ವೃಷಭ: ಏಕಾಂಗಿಯಾಗಿ ಕೈಗೊಳ್ಳುವ ನಿರ್ಧಾರದಿಂದ ಹಿನ್ನಡೆ ಅನುಭವಿಸಬೇಕಾಗುತ್ತದೆ. ವೃತ್ತಿರಂಗದಲ್ಲಿ ಲವ ಲವಿಕೆಯಿಂದ ಕೆಲಸ ಮಾಡುವಿರಿ. ಕಚೇರಿ ಕೆಲಸಗಳಲ್ಲಿ ಜಯ. ವಿವಾಹ ಪ್ರಯತ್ನಗಳಲ್ಲಿ ಸಫಲತೆ ಕಾಣುವಿರಿ.

ಮಿಥುನ: ಸಹನಶೀಲನೆ ಮೈಗೂಡಿಸಿಕೊಂಡರೆ ಇಂದು ಕಾರ್ಯಗಳಲ್ಲಿ ಯಶಸ್ಸು ಸಾಧಿಸಬಹುದು. ಆರ್ಥಿಕವಾಗಿ ಲಾಭ ಗಳಿಸುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿದೆ.

ಕರ್ಕಟಕ: ಆಶಾವಾದಿಗಳಾಗಿರುವ ನಿಮ್ಮ ಗುಣದಿಂದ ಕನಸುಗಳನ್ನು ಈಡೇರಿಸಿಕೊಳ್ಳುವಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಾಗಲಿದೆ. ವಿವಾಹ ಪ್ರಯತ್ನಲ್ಲಿ ಯಶಸ್ಸು ಸಿಗುವುದು. ದಿನದಂತ್ಯಕ್ಕೆ ಶುಭ ಸುದ್ದಿ.

ಸಿಂಹ: ವ್ಯಾಪಾರ ವಾಣಿಜ್ಯೋದ್ಯಮಿಗಳಿಗೆ ಕೊಂಚ ಹಿನ್ನಡೆಯಾದೀತು. ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಲಾಭವಾಗಲಿದೆ. ಅವಿವಾಹಿತರು ವಿವಾಹ ಪ್ರಯತ್ನವನ್ನು ಮುಂದೂಡುವುದು ಒಳ್ಳೆಯದು. ಆರೋಗ್ಯ ಸಮಸ್ಯೆಗಳು ಕಂಡುಬಂದಾವು.

ಕನ್ಯಾ: ಆರ್ಥಿಕವಾಗಿ ತುಸು ಏರುಪೇರಾಗಬಹುದು. ವಂಚನೆಗೊಳಗಾಗುವ ಭೀತಿಯಿದೆ. ಎಚ್ಚರಿಕೆ ಅಗತ್ಯ. ಕೌಟುಂಬಿಕ ಸಮಸ್ಯೆಗಳಿಗೆ ಹಿರಿಯರ ಸಲಹೆ ಪಡೆಯಿರಿ. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಕೊಂಚ ಹಿನ್ನಡೆಯಾಗಬಹುದು. ತಾಳ್ಮೆ ಅಗತ್ಯ.

ತುಲಾ: ಉದ್ಯೋಗ ಕ್ಷೇತ್ರದಲ್ಲಿ ಆತಂಕ ಸೃಷ್ಟಿಸುವ ಸನ್ನಿವೇಶಗಳು ಎದುರಾಗಲಿವೆ. ಅಪರಿಚತರನ್ನು ನಂಬಿ ಹೂಡಿಕೆ ಅಥವಾ ಯಾವುದೇ ವ್ಯವಹಾರ ಬೇಡ. ವಿದ್ಯಾರ್ಥಿಗಳಿಗೆ ಆಲಸ್ಯ ಕಂಡುಬರುವುದು. ಮನಸ್ಸು ಚಂಚಲವಾಗದಂತೆ ನೋಡಿಕೊಳ್ಳಿ.

ವೃಶ್ಚಿಕ: ಸಾಮಾಜಿಕವಾಗಿ ಸ್ಥಾನ ಮಾನ ಹೆಚ್ಚುವುದಲ್ಲದೆ, ಗೌರವ ಸಂಪಾದಿಲಸಿದ್ದೀರಿ. ಆರೋಗ್ಯದಲ್ಲಿ ಸುಧಾರಣೆಯಾಗಲಿದೆ. ಮನೆಯಲ್ಲಿ ಶುಭ ಮಂಗಲ ಕಾರ್ಯಗಳನ್ನು ನೆರವೇರಿಸಲು ಓಡಾಟ ನಡೆಸುವಿರಿ.

ಧನು: ಹೊಸ ಜನರ ಭೇಟಿಯಿಂದ ಹೊಸ ವಿಚಾರಗಳನ್ನು ತಿಳಿದುಕೊಳ್ಳುವಿರಿ. ಉದ್ಯೋಗ ಕ್ಷೇತ್ರದಲ್ಲಿ ಕೆಳ ಹಂತದ ನೌಕರರಿಗೆ ಮುನ್ನಡೆ ಯೋಗವಿದೆ. ವ್ಯವಹಾರದಲ್ಲಿ ಅನುಮಾನ ಬುದ್ಧಿ ತೋರಿಸಿ ನಷ್ಟ ಅನುಭವಿಸಬೇಕಾದೀತು. ಎಚ್ಚರ.

ಮಕರ: ಪ್ರಯತ್ನ ಬಲವಿದ್ದರೆ, ಕಾರ್ಯಗಳಲ್ಲಿ ಸಫಲತೆ ಕಾಣುವಿರಿ. ಕೃಷಿ ಕ್ಷೇತ್ರದಲ್ಲಿರುವವರಿಗೆ ಲಾಭವಾಗುವುದು. ಆದಾಯಕ್ಕೆ ಅನುಕೂಲಕರ ವಾತಾವರಣವಿರುವುದು. ಕೌಟುಂಬಿಕವಾಗಿ ಹೊಂದಾಣಿಕೆ ಅಗತ್ಯ.

ಕುಂಭ: ಸಾಂಸಾರಿಕವಾಗಿ ನಿಮ್ಮ ಕೆಲವೊಂದು ನಿರ್ಧಾರಗಳು ಇತರರಿಗೆ ಇಷ್ಟವಾಗದೇ ಹೋಗಬಹುದು. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಾಗಬಹುದು. ಖರ್ಚು ವೆಚ್ಚ ಅಧಿಕವಾಗುವುದು. ನವ ದಂಪತಿಗಳಿಗೆ ಸಂತಾನ ಸೂಚಕ ಫಲಗಳಿವೆ.

ಮೀನ: ಗುರುಬಲದಿಂದ ಆದಾಯ ವೃದ್ಧಿಯಾಗಿ ಸಂತಸವಾಗುವುದು. ಸಂಗಾತಿಯ ಸಹಕಾರ ಸಿಗಲಿದೆ. ವ್ಯಾಪಾರಿಗಳಿಗೆ ಲಾಭ ಗಳಿಸುವ ಯೋಗವಿದೆ. ಮಕ್ಕಳಿಂದ ಕಿರಿ ಕಿರಿಯಾಗಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ