ಧನು ರಾಶಿಯವರ ಲವ್ ಲೈಫ್ ಹೇಗಿರುತ್ತದೆ ಗೊತ್ತಾ?

ಮಂಗಳವಾರ, 5 ಮಾರ್ಚ್ 2019 (09:12 IST)
ಬೆಂಗಳೂರು: ಆಯಾ ರಾಶಿಗೆ ಅನುಗುಣವಾಗಿ ಜನರ ಸ್ವಭಾವ, ಗುಣನಡತೆಗಳು ವ್ಯತ್ಯಸ್ಥವಾಗಿರುತ್ತದೆ. ಅದೇ ರೀತಿ ಒಂದೊಂದು ರಾಶಿಯವರ ಲವ್ ಲೈಫ್ ಒಂದೊಂದು ರೀತಿ ಇರುತ್ತದೆ. ಇಂದು ಧನು ರಾಶಿ ನೋಡೋಣ.


ಧನು ರಾಶಿಯವರು ಮಾತಿನಲ್ಲೇ ಮೋಡಿ ಮಾಡುವವರು. ಇವರನ್ನು ಒಂದೆಡೆ ಹಿಡಿದಿಟ್ಟುಕೊಳ್ಳುವುದು ಕಷ್ಟ. ಈ ರಾಶಿಯವರಿಗೆ ಅವರಂತೇ ಸಾಹಸ ಇಷ್ಟಪಡುವವರ ಮೇಲೆ ಲವ್ ಆಗುತ್ತದೆ.  ಕೆಲವೊಮ್ಮೆ ಇವರ ಸುತ್ತಾಡುವ ಸ್ವಭಾವ, ಸಂಗಾತಿ ಬಗೆಗೆ ಡೋಂಟ್ ಕೇರ್ ಸ್ವಭಾವ ಇವರ ತದ್ವಿರುದ್ಧ ಗುಣದವರಿಗೆ ನಿರಾಶೆ ಉಂಟುಮಾಡಬಹುದು.

ಹೀಗಾಗಿ ಈ ರಾಶಿಯವರು ಅವರದ್ದೇ ಸ್ವಭಾವದವರನ್ನೇ ಲವ್ ಮಾಡಬೇಕು. ಈ ರಾಶಿಯವರಿಗೆ ಪ್ರೀತಿಯಲ್ಲಿ ಯಶಸ್ಸು ಸಿಗಬೇಕಾದರೆ ಸಂಗಾತಿಯೂ ತನ್ನ ಜತೆಗಾರ ಎನ್ನುವ ವಿಚಾರ ಮನಸ್ಸಿಗೆ ಮುಟ್ಟಬೇಕು. ಇಲ್ಲದಿದ್ದರೆ ಈ ರಾಶಿಯವರನ್ನು ಲವ್ ಮಾಡಿದರೆ ನಿರಾಶೆಯೇ ಗತಿ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ