ಬೆಳಗಿನ ಜಾವ ಈ ರೀತಿ ಕನಸು ಕಂಡರೆ ಅರ್ಥವೇನು?

Krishnaveni K

ಶುಕ್ರವಾರ, 5 ಜನವರಿ 2024 (11:16 IST)
ಬೆಂಗಳೂರು: ನಮಗೆ ಪ್ರತಿನಿತ್ಯ ಬೀಳುವ ಕನಸುಗಳಿಗೆ ವಿಶೇಷ ಅರ್ಥವಿದೆಯೇ? ನಮಗೆ ಬೀಳುವ ಕನಸುಗಳಿಗೆ ಅರ್ಥವೇನು ಎಂದು ಹಲವರಲ್ಲಿ ಜಿಜ್ಞಾಸೆಯಿರಬಹುದು.

ಕನಸುಗಳು ಕೆಲವೊಮ್ಮೆ ನಮಗೆ ಭಯ ಹುಟ್ಟಿಸಿದರೆ, ಇನ್ನು ಕೆಲವೊಮ್ಮೆ ದಿನವಿಡೀ ಒಂದು ರೀತಿಯ ಉತ್ಸಾಹ ತುಂಬುತ್ತದೆ. ಕೆಲವೊಂದು ಕನಸುಗಳು ನೆನಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವು ಅರೆಕ್ಷಣದಲ್ಲಿ ಮರೆತೇ ಬಿಡುತ್ತೇವೆ.

ಬೆಳಗಿನ ಜಾವದಲ್ಲಿ ಬೀಳುವ ಕನಸು ನಿಜವಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಕೆಲವೊಮ್ಮೆ ಬೆಳಗಿನ ಜಾವದಲ್ಲಿ ಯಾರೋ ನಮ್ಮ ಆತ್ಮೀಯರೇ ಸಾವನ್ನಪ್ಪಿದ ರೀತಿ ಕನಸು ಬೀಳುತ್ತವೆ. ಇದರಿಂದ ನಮಗೆ ಒಳಗೊಳಗೇ ಆತಂಕವಾಗುವುದು ಇದೆ.

ಆದರೆ ಬೆಳಗಿನ ಜಾವ ನಮ್ಮ ಸಮೀಪದವರು ಸಾವನ್ನಪ್ಪಿದಂತೆ ಕನಸು ಬಿದ್ದರೆ ಭಯ ಬೀಳುವುದು ಬೇಡ. ಈ ರೀತಿ ಕನಸು ಕಂಡರೆ ಅವರ ಆಯಸ್ಸು ವೃದ್ಧಿಯಾಗುತ್ತದೆ, ಅವರಿಗೆ ಇನ್ನಷ್ಟು ಆಯಸ್ಸಿದೆ ಎಂದು ಅರ್ಥ. ಹೀಗಾಗಿ ಬೆಳಗಿನ ಜಾವ ಸಾವಿನ ಕನಸು ಕಂಡರೆ ಭಯ ಬೇಡ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ