ರಾಮನವಮಿಯನ್ನು ಒಂಭತ್ತು ದಿನ ಆಚರಿಸಿದರೆ ಶ್ರೇಷ್ಠ

ಭಾನುವಾರ, 10 ಏಪ್ರಿಲ್ 2022 (07:10 IST)
ಬೆಂಗಳೂರು: ಮಹಾವಿಷ್ಣುವಿನ ಅಂಶ ಶ್ರೀರಾಮಚಂದ್ರ ಜನ್ಮತಾಳಿದ ದಿನವಾದ ಇಂದು ದೇಶದಾದ್ಯಂತ ರಾಮನವಮಿಯಾಗಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ಚೈತ್ರ ಮಾಸ ಶುಕ್ಲ ಪಕ್ಷದ ನವಮಿ ತಿಥಿಯಂದು ದಶರಥ ಮಹಾರಾಜ ಮತ್ತು ಕೌಸಲ್ಯರ ಪುತ್ರನಾಗಿ ಭುವಿಯಲ್ಲಿ ಅವತರಿಸಿದ ಶ್ರೀರಾಮಚಂದ್ರ ಅನೇಕ ರೀತಿಯಲ್ಲಿ ನಮಗೆ ಆದರ್ಶಪ್ರಾಯನಾಗಿದ್ದಾನೆ.

ಅಂತಹ ಶ್ರೇಷ್ಠನ ಜನ್ಮದಿನವನ್ನು ಕೇವಲ ಒಂದು ದಿನ ಆಚರಿಸಿದರೆ ಸಾಲದು. ಒಂಭತ್ತು ದಿನಗಳ ಕಾಲ ರಾಮ ನಾಮ ಹಾಡುತ್ತಾ, ದೇವರ ಪೂಜೆಯಲ್ಲಿ ತೊಡಗಿಸಿಕೊಂಡರೆ ಶ್ರೇಷ್ಠ. ರಾಮನ ಜನ್ಮದಿನವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ ಆತನ ಆದರ್ಶಗಳನ್ನು ಸದಾ ಸ್ಮರಿಸಿ, ಪಾಲಿಸಿದರೆ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ