ಕೃಷ್ಣ ಜನ್ಮಾಷ್ಠಮಿ ದಿನ ರಾತ್ರಿ ಪೂಜೆ ಹೀಗೆ ಮಾಡಿ

ಶುಕ್ರವಾರ, 23 ಆಗಸ್ಟ್ 2019 (16:28 IST)
ಬೆಂಗಳೂರು: ಕೃಷ್ಣ ಜನ್ಮಾಷ್ಠಮಿಯ ಶುಭದಿನವಾದ ಇಂದು ರಾತ್ರಿ ಈ ರೀತಿ ಪೂಜೆ ಮಾಡಿದರೆ ಭಗವಂತನ ಕೃಪೆಗೆ ಪಾತ್ರರಾಗಬಹುದು.


ಚಂದ್ರೋದಯವಾದ ಬಳಿಕ ಶ್ರೀಹರಿಯನ್ನು ನೆನೆಯುತ್ತಾ ಅರ್ಘ್ಯ ಕೊಡಬೇಕು. ಅರ್ಘ್ಯ ಕೊಡುವಾಗ ಕ್ಷೀರಸಾಗರದಲ್ಲಿ ಹುಟ್ಟಿದ,  ಅತ್ರಿಗೋತ್ರ ಸಮುದ್ಭೂತನಾದ ರೋಹಿಣಿಪತಿಯಾದ ಚಂದ್ರನೇ ನಿನಗೆ ನಾನು ನಮಸ್ಕರಿಸುತ್ತೇನೆ. ನಾನು ಕೊಟ್ಟ ಅರ್ಘ್ಯವನ್ನು ಸ್ವೀಕರಿಸು ಎನ್ನಬೇಕು.

ಮಧ್ಯರಾತ್ರಿ ಕೃಷ್ಣನ ವಿಗ್ರಹವನ್ನು ತೊಟ್ಟಿಲಿನಲ್ಲಿ ಹಾಕಿ ತೂಗಿ, ಆರತಿ, ನೈವೇದ್ಯ ಮಾಡಬೇಕು. ನಂತರ ಶ್ರೀಕೃಷ್ಣನಿಗೆ ಶುದ್ಧವಾದ ಜಲವನ್ನು ಶಂಖದಲ್ಲಿ ಹಾಕಿ ಪುಷ್ಪ ಫಲ ಚಂದನಗಳೊಂದಿಗೆ ಅರ್ಘ್ಯ ಕೊಡಬೇಕು. ನಂತರ ವಿವಿಧ ಭಕ್ಷ್ಯಗಳಿಂದ ನೈವೇದ್ಯ ಮಾಡಿ ಪೂಜೆ ಮಾಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ