ಬೆಂಗಳೂರು: ಯಾರಿಗಾದರೂ ಕಾರು, ಬಂಗಲೆ ಎಂದು ಜೀವನದಲ್ಲಿ ಇದ್ದಕ್ಕಿದ್ದ ಹಾಗೆ ಯಶಸ್ಸಿನ ಸುರಿಮಳೆಯಾದರೆ ಅವರಿಗೆ ಶುಕ್ರದೆಸೆ ಇರಬೇಕು ಎಂದು ಆಡುವುದನ್ನು ನೋಡಿದ್ದೇವೆ.
ಆದರೆ ಶುಕ್ರದೆಸೆ ಯಾವಾಗಲೂ ನಮಗೆ ಒಳ್ಳೆಯದನ್ನೇ ಮಾಡಬೇಕೆಂದೇನಿಲ್ಲ. ಶುಕ್ರದೆಸೆ ನಮಗೆ ಲಾಭ ತರುವುದಿದ್ದರೆ ಧನ, ಕನಕ, ವಾಹನ, ಗೃಹ, ಆಸ್ತಿ ಇತ್ಯಾದಿ ಸೌಕರ್ಯಗಳು ನಿಮ್ಮದಾಗುತ್ತದೆ.
ಆದರೆ ಒಂದು ವೇಳೆ ಶುಕ್ರದೆಸೆ ಪರಿಣಾಮ ಕೆಟ್ಟದಾಗಿದ್ದರೆ ನಿಮಗೆ ಇದರ ರಿವರ್ಸ್ ಪರಿಣಾಮ ಎದುರಿಸಬೇಕಾಗುತ್ತದೆ. ಶುಕ್ರದೆಸೆ ಪರಿಣಾಮ ನಿಮಗೆ ಕೆಟ್ಟದು ಮಾಡುತ್ತಿದ್ದರೆ, ಮನಸ್ಸಿನ ಶಾಂತಿ ಕೆಡಿಸುತ್ತದೆ. ಐಷಾರಾಮಿ ಜೀವನಕ್ಕೆ ಕಲ್ಲು ಬೀಳುತ್ತದೆ.
ಒಂದು ವೇಳೆ ಶುಕ್ರದೆಸೆಯಿಂದ ನಿಮಗೆ ಕೆಟ್ಟದಾಗುತ್ತಿದ್ದರೆ ಶುಕ್ರವಾರ ಉಪವಾಸವಿದ್ದು ಲಕ್ಷ್ಮೀ ದೇವಿಯ ಪೂಜೆ ಮಾಡಬೇಕಾಗುತ್ತದೆ. 6 ಮುಖೀ ರುದ್ರಾಕ್ಷಿ ಧರಿಸಿದರೆ ಉತ್ತಮ. ಎಲ್ಲದಕ್ಕಿಂತ ಹೆಚ್ಚಾಗಿ ಶ್ವೇತ ವಸ್ತ್ರವನ್ನೇ ಆದಷ್ಟು ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.