ವರಮಹಾಲಕ್ಷ್ಮಿ ವ್ರತ ವಿಶೇಷ: ಪೂಜಾ ಸಾಮಗ್ರಿಗಳು ಏನೇನಿರಬೇಕು?

ಗುರುವಾರ, 19 ಆಗಸ್ಟ್ 2021 (08:44 IST)
ಬೆಂಗಳೂರು: ಬೇಡಿದ ವರಗಳನ್ನು ಕರುಣಿಸುವ ವರಮಹಾಲಕ್ಷ್ಮಿ ದೇವಿಯ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ಹತ್ತಿರದ ಶುಕ್ರವಾರ ಆಚರಿಸಲಾಗುತ್ತಿದೆ. ನಾಳೆ ವರಮಹಾಲಕ್ಷ್ಮಿ ಹಬ್ಬವಿದ್ದು, ಈ ದಿನ ಪೂಜೆಗೆ ಯಾವೆಲ್ಲಾ ಸಾಮಗ್ರಿಗಳು ಇರಬೇಕು ಎನ್ನುವುದನ್ನು ನೋಡೋಣ.


ಈ ದಿನ ಲಕ್ಷ್ಮೀ ದೇವಿಗೆ ಪೂಜೆ ಮಾಡಿ. ಸಾಮಾನ್ಯವಾಗಿ ಮನೆಯಲ್ಲಿರುವ ವಸ್ತುಗಳು ಮತ್ತು ಯೋಗ್ಯತಾನುಸಾರ ವಸ್ತುಗಳನ್ನು ಉಪಯೋಗಿಸಿ ಪೂಜೆ ಮಾಡಬಹುದು.

ರಂಗೋಲಿ, ಮಣೆ ಅಥವಾ ಮಂಟಪ, ದೇವಿಯ ವಿಗ್ರಹ, ಕಲಶ, ದೀಪ, ತುಪ್ಪ, ಎಣ್ಣೆ, ಬತ್ತಿ, ಗಂಟೆ, ಪಂಚಪಾತ್ರೆ, ಉದ್ದರಣೆ, ಅರ್ಘ್ಯ ಪಾತ್ರೆ, ನೀರು, ಅರಶಿನ, ಕುಂಕುಮ, ಮಂತ್ರಾಕ್ಷತೆ, ಮಾವಿನ ಎಲೆ, ಊದುಕಡ್ಡಿ, ಶ್ರೀಗಂಧ, ರವಿಕೆ ಕಣ, ದಾರ, ಹೂವು, ಗೆಜ್ಜೆ, ಪತ್ರೆ, ಹಾಲು, ಮೊಸರು, ತುಪ್ಪ, ಸಕ್ಕರೆ, ಜೇನುತುಪ್ಪ, ಸೀಯಾಳ, ವೀಳ್ಯದ ಎಲೆ, ಅಡಿಕೆ, ಹಣ್ಣು, ತೆಂಗಿನ ಕಾಯಿ, ಪಾಯಸ, ಹುಗ್ಗಿ, ಅನ್ನ, ಕೋಸಂಬರಿ, ಮಂಗಳಾರತಿ ತಟ್ಟೆ, ಆರತಿ ತಟ್ಟೆ, ಹೂಬತ್ತಿ ಇತ್ಯಾದಿ ವಸ್ತುಗಳು ಅಗತ್ಯವಾಗಿ ಇರಬೇಕು. ಸಾಮಾನ್ಯವಾಗಿ ಪೂಜಿಸುವ ಪೂಜಾ ಸಾಮಗ್ರಿಗಳ ಜೊತೆ 12 ಗಂಟಿನ ದಾರ ಇಟ್ಟು ಪೂಜಿಸಿ, ಪೂಜೆಯ ನಂತರ ಇದನ್ನು ಕೊರಳಿಗೆ ಹಾಕಿಕೊಳ್ಳಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ