ಯಾವ ವಾರ ಯಾವ ದೇವರನ್ನು ಪೂಜೆ ಮಾಡಬೇಕು?

Krishnaveni K

ಮಂಗಳವಾರ, 23 ಜನವರಿ 2024 (08:40 IST)
ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದಲ್ಲಿ ಒಂದೊಂದು ದಿನ ಒಬ್ಬೊಬ್ಬ ದೇವತೆಯ ವಿಶೇಷ ದಿನವೆಂದು ಪೂಜೆ ಮಾಡುತ್ತೇವೆ. ಹಾಗಿದ್ದರೆ ಯಾವ ದಿನ ಯಾವ ದೇವರನ್ನು ಪೂಜಿಸಬೇಕು?

ಹಿಂದೂ ಪುರಾಣದ ಪ್ರಕಾರ ಭಾನುವಾರ ಹೆಸರೇ ಹೇಳುವಾಗ ಸೂರ್ಯನ ವಾರ. ಈ ದಿನ ಸೂರ್ಯದೇವರನ್ನು ಆರಾಧಿಸಿದರೆ ಜೀವನದಲ್ಲಿ ಯಶಸ್ಸು, ಕೀರ್ತಿ ಸಂಪಾದಿಸಬಹುದು.

ಸೋಮವಾರ ಶಿವನ ವಾರ. ಈ ದಿನ ಈಶನನ್ನು ಪೂಜಿಸುವುದು, ಈಶನ ದೇವಾಲಯಕ್ಕೆ ಭೇಟಿ ನೀಡುವುದು, ಈಶನಿಗೆ ಸೇವೆ ಮಾಡುವುದು ಉತ್ತಮ. ಮಂಗಳವಾರದಂದು ಆಂಜನೇಯ ಸ್ವಾಮಿ ಮತ್ತು ದುರ್ಗಾ ದೇವಿಯ ಆರಾಧನೆ ಮಾಡಬಹುದು.

ಬುಧವಾರ ವಿದ್ಯೆಗೆ ಅಧಿದೇವತೆಯಾಗಿರುವ ಗಣಪತಿಯ ದಿನ. ಗುರುವಾರ ರಾಘವೇಂದ್ರ ಸ್ವಾಮಿಗಳ ಆರಾಧನೆ ಮಾಡುವುದರಿಂದ ಪುಣ್ಯ ಫಲ ಬರುತ್ತದೆ. ಶುಕ್ರವಾರ ಲಕ್ಷ್ಮೀ ದೇವಿಯ ದಿನ. ಶನಿವಾರ ಶನಿಯ ಪ್ರಭಾವ ತಗ್ಗಿಸಲು ಆಂಜನೇಯ ಸ್ವಾಮಿಯ ಪ್ರಾರ್ಥನೆ ಮಾಡಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ