ಸಂತಾನ ಭಾಗ್ಯ ಮತ್ತು ವಿವಾಹ ಪ್ರಾಪ್ತಿಗೆ ಯಾವ ಹೋಮ ಮಾಡಬೇಕು?
ಸೋಮವಾರ, 22 ಆಗಸ್ಟ್ 2022 (09:10 IST)
ಬೆಂಗಳೂರು: ಜನ್ಮ ಜನ್ಮಾಂತರದ ಪಾಪ ಕರ್ಮಗಳ ಫಲವಾಗಿ ಕೆಲವರಿಗೆ ವಿವಾಹ, ಸಂತಾನ ಭಾಗ್ಯಕ್ಕೆ ತೊಂದರೆಯಾಗಬಹುದು. ಇಂತಹವರಿಗೆ ಯಾವ ಹೋಮ ಮಾಡಿದರೆ ಒಳಿತಾಗುತ್ತದೆ ನೋಡೋಣ.
ವಿವಾಹಾದಿ ಅಡ್ಡಿಗಳ ನಿವಾರಣೆಗೆ: ವಿವಾಹ ಸಂಬಂಧವಾದ ಅಡ್ಡಿಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು ಉಗ್ರ ನರಸಿಂಹ ಹೋಮ, ಸ್ವಯಂವರ ಪಾರ್ವತಿ ಹೋಮ, ಬಾಣೇಶಿ ಹೋಮ, ಅಶ್ವಾರೂಢ ಪಾರ್ವತಿ ಹೋಮ ಮಾಡಿದರೆ ಸೂಕ್ತ.
ಸಂತಾನ ಭಾಗ್ಯಕ್ಕಾಗಿ: ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮಗಳ ಫಲವಾಗಿ ಕೆಲವು ದಂಪತಿಗಳು ಸಂತಾನಹೀನತೆಯಿಂದ ಕೊರಗುತ್ತಾರೆ. ಅಂತಹವರು ಗೋಪಾಲಕೃಷ್ಣ ಹೋಮ, ನಾಗರಾಜ ಮಂತ್ರ ಹೋಮ, ಪುರುಷ ಸೂಕ್ತ ಹೋಮ, ಶ್ರೀ ವಿದ್ಯಾ ಹೋಮ, ಶ್ರೀ ರುದ್ರ ಹೋಮ ಮಾಡಿದರೆ ಉತ್ತಮ.