ಜಾತಕದಲ್ಲಿ ಈ ದೋಷವಿದ್ದಾಗ ವಿವಾಹ ವಿಳಂಬವಾಗುತ್ತದೆ

ಶನಿವಾರ, 15 ಡಿಸೆಂಬರ್ 2018 (09:13 IST)
ಬೆಂಗಳೂರು: ಎಷ್ಟೇ ಸಂಬಂಧ ಹುಡುಕಿದರೂ ಕಂಕಣ ಕೂಡಿಬರಲ್ಲ, ಒಂದು ವೇಳೆ ಮದುವೆಯಾದದರೂ ಸಂಬಂಧ ಚೆನ್ನಾಗಿರಲ್ಲ ಎಂದರೆ ಇದಕ್ಕೆ ಕುಜದೋಷ ಮುಖ್ಯ ಕಾರಣ.


ಜಾತಕದಲ್ಲಿ ಕುಜ 1, 4,8 ಮತ್ತು 12 ನೇ ಮನೆಯಲ್ಲಿದ್ದಾಗ ಕುಜದೋಷ ಎಂದು ಹೇಳಬಹುದು.ಇದರಿಂದ ವಿವಾಹಕ್ಕೆ ವಿಳಂಬ, ಮದುವೆಯಾದ ಮೇಲೆ ವಿರಸ, ವಿಚ್ಚೇದನಗಳಾಗುವ ಸಂಭವವಿರುತ್ತದೆ.

ಇಂತಹ ಸಂದರ್ಭದಲ್ಲಿ ಸುಬ್ರಹ್ಮಣ್ಯ, ನಾಗದೇವತೆಗಳ ಆರಾಧನೆ, ಮಂಗಳವಾರ, ಶನಿವಾರ ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುವುದರಿಂದ ಕುಜದೋಷದ ಪ್ರಭಾವ ಕಡಿಮೆಯಾಗಬಹುದು. ಕುಜದೋಷವಿದ್ದಲ್ಲಿ ಅಂತಹ ಜಾತಕವಿರುವ ವ್ಯಕ್ತಿಯನ್ನೇ ಮದುವೆಯಾಗಬಹುದು. ಇಬ್ಬರ ಜಾತಕದಲ್ಲೂ ಕುಜದೋಷವಿದ್ದಾಗ ದೋಷ ನಿವಾರಣೆಯಾಗುತ್ತದೆ.

ಅಶ್ವಿನಿ, ಮೃಗಶಿರೆ, ಪುನರ್ವಸು, ಪುಷ್ಯ, ಆಶ್ಲೇಷಾ, ಸ್ವಾತಿ, ಅನುರಾಧ, ಪೂರ್ವಾಷಾಢ, ಉತ್ತರಾಷಾಢ, ಶ್ರವಣ, ಉತ್ತರಾಭದ್ರ, ರೇವತಿ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷದ ಭಯವಿಲ್ಲ. ಉಳಿದ ನಕ್ಷತ್ರದಲ್ಲಿ ಜನಿಸಿದವರಿಗೆ ಕುಜದೋಷ ಬರುವ ಸಾಧ್ಯತೆಯಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ