ಬೆಂಗಳೂರು: ಇಂದು ಶ್ರೀಕೃಷ್ಣ ಜನ್ಮಾಷ್ಠಮಿ. ಕೃಷ್ಣ ಎಂದ ಕೂಡಲೇ ನಮಗೆ ಆತನ ಬಾಲ ಲೀಲೆ ನೆನಪಾಗುತ್ತದೆ. ಅದರಲ್ಲೂ ಬೆಣ್ಣೆ ಕಳ್ಳಲು ಆತ ಮಾಡುತ್ತಿದ್ದ ಸಾಹಸಗಳ ಕತೆಗಳು ನೆನಪಾಗುತ್ತವೆ.
ಅಷ್ಟಕ್ಕೂ ಬಾಲಕೃಷ್ಣನಿಗೆ ಬೆಣ್ಣೆ ಎಂದರೆ ಅಷ್ಟೊಂದು ಇಷ್ಟ ಯಾಕೆ ಗೊತ್ತಾ? ಕೃಷ್ಣನನ್ನು ಚಿತ್ತಚೋರ ಎಂದೂ ಕರೆಯುತ್ತಾರೆ. ಅಂದರೆ ಮನಸ್ಸು ಕದಿಯುವ ಅಂದಗಾರ.
ಬೆಣ್ಣೆ ಎಂದರೆ ಮೃದು ವಸ್ತು. ಹೀಗಾಗಿ ನಮ್ಮ ಮನಸ್ಸು, ಹೃದಯ ಬೆಣ್ಣೆಯಷ್ಟು ಮೃದುವಾಗಿರಬೇಕು ಎಂಬುದನ್ನು ಸೂಚಿಸುತ್ತದೆ. ಬೆಣ್ಣೆ ಮಜ್ಜಿಗೆಯಲ್ಲಿ ಅತ್ತಿತ್ತ ಓಲಾಡುವಂತೆ ನಮ್ಮ ಮನಸ್ಸೂ ಇರುತ್ತದೆ. ಮೊಸರು ಕಡೆದು ಬೆಣ್ಣೆ ಸಿಗುವ ಹಾಗೆ ನಮ್ಮ ಜೀವನದಲ್ಲೂ ಕೆಟ್ಟದ್ದನ್ನು ಅರಗಿಸಿದಾಗ ಒಳ್ಳೆತನ ಸಿಗುವಂತೆ ಬೆಣ್ಣೆ ಎಂಬುದನ್ನು ಸೂಚಿಸುತ್ತದೆ. ಅದೇ ರೀತಿ ನಂದಗೋಕುಲನ ಅಂಗಳದಲ್ಲಿ ಯಾರೇ ಎಷ್ಟೇ ಮೊಸರು ಕಡೆದು ಬೆಣ್ಣೆ ಮಾಡಿದರೂ ಅದೆಲ್ಲವೂ ಕೊನೆಗೆ ಶ್ರೀಕೃಷ್ಣನಿಗೆ ಅರ್ಪಣೆಯಾಗುತ್ತಿತ್ತು.