ಬೆಂಗಳೂರು: ಕಲಶ ಪೂಜೆ ಮಾಡುವಾಗ ಅದರ ಕೆಳಗೆ ಅಕ್ಕಿಯನ್ನು ಹಾಕಿ ಅದರ ಮೇಲೆ ಕಲಶವಿಟ್ಟು ಪೂಜೆ ಮಾಡುವುದು ರೂಢಿ. ಕಲಶದ ಕೆಳಗೆ ಅಕ್ಕಿ ಹಾಕುವುದು ಯಾಕೆ ಗೊತ್ತಾ?
ಕಲಶದ ಕೆಳಗೆ ಅಕ್ಕಿಯನ್ನು ಕಡ್ಡಾಯವಾಗಿ ಹಾಕಬೇಕು. ಯಾಕೆಂದರೆ ಅಕ್ಕಿ ಶಾಂತಿಯ ಸಂಕೇತ. ಪ್ರತಿ ದಿನ ನಮ್ಮ ಹಸಿವನ್ನು ನೀಗಿಸುವ ಧಾನ್ಯ. ಹಾಗೆಯೇ ಇದು ಏಕದಳ ಧಾನ್ಯವಾಗಿರುವುದರಿಂದ ಪೂಜೆ ಮಾಡುವ ಕಲಶದ ಕೆಳಗೆ ಹಾಕಲಾಗುತ್ತದೆ.
ಮನುಷ್ಯನಿಗೆ ಉಪಕಾರಿಯಾಗುವ ಎಲ್ಲಾ ವಸ್ತುಗಳೂ ದೈವರೂಪವೇ ಎಂದು ಪರಿಗಣಿಸಲಾಗುತ್ತದೆ. ಅವೆಲ್ಲವಕ್ಕೂ ನಮ್ಮ ಧರ್ಮ ದೈವ ಸನ್ನಿಧಿಯಲ್ಲಿ ಸ್ಥಾನ ಕಲ್ಪಿಸಿದೆ.