ಸೂರ್ಯಾಸ್ತದ ಬಳಿಕ ಮೊಗ್ಗುಗಳನ್ನು ಕೀಳಬಾರದು ಯಾಕೆ ಗೊತ್ತಾ?
ಬುಧವಾರ, 3 ಏಪ್ರಿಲ್ 2019 (09:08 IST)
ಬೆಂಗಳೂರು: ಸಾಯಂಕಾಲ ಅಥವಾ ಸೂರ್ಯಾಸ್ತಮಾನವಾದ ಮೇಲೆ ದೇವರಿಗೆ ಹೂ ಕೊಯ್ಯಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿರಬಹುದು. ಯಾಕೆ ಗೊತ್ತಾ?
ಬ್ರಾಹ್ಮಿ ಮುಹೂರ್ತದಲ್ಲಿ ದೇವತೆಗಳ ಪವಿತ್ರಕಗಳು ಪೃಥ್ವಿಯ ಮೇಲೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿಸಲ್ಪಡುತ್ತವೆ. ಯಾವ ಹೂವುಗಳಲ್ಲಿ ಯಾವ ದೇವತೆಗಳ ಪವಿತ್ರಕಗಳನ್ನು ಆಕರ್ಷಿಸುವ ಕ್ಷಮತೆ ಹೆಚ್ಚಿರುತ್ತದೋ ಆ ಹೂವುಗಳ ಕಡೆಗೆ ಆ ಪವಿತ್ರಕಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗುತ್ತವೆ. ಸೂರ್ಯನ ತೇಜದಿಂದಾಗಿ ವಾತಾವರಣದಲ್ಲಿರುವ ರಜ-ತಮ ಕಣಗಳ ವಿಘಟನೆಯಾಗುತ್ತದೆ.
ಆದ್ದರಿಂದ ಸೂರ್ಯಾಸ್ತದ ಮೊದಲಿನ ವಾತಾವರಣವು ಸೂರ್ಯಾಸ್ತದ ನಂತರದ ವಾತಾವರಣದ ತುಲನೆಯಲ್ಲಿ ಹೆಚ್ಚು ಸಾತ್ವಿಕವಾಗಿರುತ್ತದೆ. ಸೂರ್ಯಾಸ್ತದ ನಂತರ ವಾಯುಮಂಡಲದಲ್ಲಿ ರಜ-ತಮ ಪ್ರಮಾಣವು ಹೆಚ್ಚಾಗಿ ಕೆಟ್ಟ ಶಕ್ತಿಗಳ ಸಂಚಾರವು ಹೆಚ್ಚಾಗುವುದರಿಂದ ವಾತಾವರಣವು ಕಲುಷಿತವಾಗುತ್ತದೆ. ಆದ್ದರಿಂದ ಸೂರ್ಯಾಸ್ತದ ನಂತರ ಹೂವಿನ ಮೊಗ್ಗುಗಳ ರಜ-ತಮಯುಕ್ತ ಕಣಗಳಿಂದ ತುಂಬಿರುವುದರಿಂದ ದೇವರ ಪವಿತ್ರಕಗಳನ್ನು ಸೆಳೆಯುವ ಕ್ಷಮತೆಯು ಕಡಿಮೆಯಾಗುತ್ತದೆ. ಇದಕ್ಕಾಗಿಯೇ ಸೂರ್ಯಾಸ್ತದ ನಂತರ ಮೊಗ್ಗುಗಳನ್ನು ಕೀಳಬಾರದು ಎನ್ನುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ