ಗೌರಿ ಪೂಜೆಯನ್ನು ಯಾರು ಯಾಕಾಗಿ ಆಚರಿಸಬೇಕು?

ಮಂಗಳವಾರ, 30 ಆಗಸ್ಟ್ 2022 (08:20 IST)
ಬೆಂಗಳೂರು: ಗಣೇಶನಿಗಿಂತ ಮೊದಲು ಗೌರಿ ಪೂಜೆ ಮಾಡುವುದು ವಾಡಿಕೆ. ಹಾಗಿದ್ದರೆ ಗೌರಿ ಪೂಜೆ ಯಾರೆಲ್ಲಾ ಮತ್ತು ಯಾಕಾಗಿ ಮಾಡಿದರೆ ಶ್ರೇಷ್ಠ?

ವಿವಾಹವಾಗಿ ದಾಂಪತ್ಯ ಜೀವನ ಗಟ್ಟಿಯಾಗಬೇಕೆಂಬ ಕಾರಣಕ್ಕೆ ವಿವಾಹಿತ ಮಹಿಳೆ ಉಪವಾಸವಿದ್ದು ಗೌರಿ ವ್ರತ ಮಾಡಬಹುದು. ಇದಲ್ಲದೆ, ವಿವಾಹ ಅಪೇಕ್ಷಿತ ಹೆಣ್ಣು ಮಕ್ಕಳೂ ಭಕ್ತಿಯಿಂದ ಗೌರಿ ಪೂಜೆ ಮಾಡಿದಲ್ಲಿ ಬಯಸಿದ ವರನ ಕೈಹಿಡಿಯಲು ಆ ದೇವಿ ಆಶೀರ್ವದಿಸುತ್ತಾಳೆ ಎಂಬ ನಂಬಿಕೆಯಿದೆ.

ಪತಿಯ ಆರೋಗ್ಯ, ಆಯುಷ್ಯ ವೃದ್ಧಿಗಾಗಿ ಮತ್ತು ಕುಟುಂಬದ ಸಮೃದ್ಧಿಗಾಗಿ ಸ್ವರ್ಣ ಗೌರಿ ವ್ರತ ಮಾಡುವುದು ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ