ಬೆಂಗಳೂರು: ಮದುವೆಯಾಗಲಿರುವ ಕನ್ಯಾಮಣಿಗಳು ಹೆಬ್ಬೆರಳಿನಲ್ಲಿಯೂ ಗಂಡನ ಮನೆಗೆ ಅದೃಷ್ಟ ಹೊತ್ತು ತರುತ್ತಾರಂತೆ. ಅವರ ಬೆರಳು ಹೇಗಿದ್ದರೆ ಗಂಡನ ಮನೆಗೆ ಮತ್ತು ಅವರಿಗೆ ಅದೃಷ್ಟ.
ಹೆಣ್ಣು ಮಕ್ಕಳ ಕಾಲಿನ ಹೆಬ್ಬೆರಳು ನಡು ಬೆರಳಿಗಿಂತ ಚಿಕ್ಕದಾಗಿರಬೇಕು. ಹೀಗಿದ್ದರೆ ಆಕೆ ಮುಂದೆ ಎಲ್ಲಾ ರೀತಿಯಲ್ಲೂ ಚೆನ್ನಾಗಿರುತ್ತಾಳೆ. ಆಕೆ ಹೋಗುವ ಮನೆಗೆ ಅದೃಷ್ಟ, ಐಶ್ವರ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಜತೆಗೆ ಆಕೆ ಗಂಡನ ಮನೆಯಲ್ಲಿ ಆಧಿಪತ್ಯ ಸ್ಥಾಪಿಸುತ್ತಾಳೆ. ಆಕೆಯ ಮೇಲೆ ಎಲ್ಲರಿಗೂ ಗೌರವ ಹೆಚ್ಚಿರುತ್ತದೆ ಎಂಬ ನಂಬಿಕೆಯಿದೆ.