ಶಂಖದ ಮಹತ್ವ ಮತ್ತು ಹಿನ್ನಲೆ ಏನು?

ಸೋಮವಾರ, 8 ಮೇ 2017 (08:31 IST)
ಬೆಂಗಳೂರು: ಶಂಖ ಊದುವುದು ನಮ್ಮ ಹಿಂದಿನಿಂದಲೂ  ನಡೆದುಕೊಂಡು ಬಂದ ಪದ್ಧತಿ. ಇದಕ್ಕೊಂದು ಸ್ವಾರಸ್ಯಕರ ಕತೆಯೂ ಇದೆ.

 
ಬ್ರಹ್ಮನಲ್ಲಿದ್ದ ವೇದಶಾಸ್ತ್ರ ಪುಸ್ತಕಗಳನ್ನು ಅಪಹರಿಸಿ ಅಸುರನು ಸಾಗರದ ತಳ ಭಾಗದಲ್ಲಿ ಅಡಗಿ ಕುಳಿತಿದ್ದನು. ಅವನನ್ನು ದೇವತೆಗಳ ಕೋರಿಕೆಯಂತೆ ಮಹಾವಿಷ್ಣು ಸಂಹಾರ ಮಾಡಿ ಶಂಖಾಕೃತಿಯ ತಲೆ ಬುರುಡೆಯನ್ನು ಊದಿದಾಗ ವಿಶಿಷ್ಟ ಓಂಕಾರ ಸ್ವರ ಹೊಮ್ಮಿತು.

ಹೀಗಾಗಿ ಶಂಖವನ್ನು ಧರ್ಮ, ವಿಜಯದ ಸಂಕೇತವಾಗಿ ಊದುವ ಪದ್ಧತಿ ಪ್ರಾರಂಭವಾಯಿತು. ಶಂಖದಿಂದ ಬಂದರೆ ತೀರ್ಥ ಎಂಬ ಗಾದೆ ನಮ್ಮಲ್ಲಿದೆ. ಶಂಖದ ನೀರು ಪವಿತ್ರ ಎಂಬ ನಂಬಿಕೆಯಿದೆ. ಅದರ ನೀರನ್ನು ಕುಡಿದು ತಲೆಗೆ ಪ್ರೋಕ್ಷಣೆ ಮಾಡುವುದರಿಂದ ಪಾಪ ನಿವಾರಣೆಯಾಗುವುದು ಎಂಬ ನಂಬಿಕೆ.

ಶಂಖ ಊದುವುದರಿಂದ ಮನೆಯಲ್ಲಿರುವ ದುಷ್ಟ ಶಕ್ತಿ ನಿವಾರಣೆಯಾಗುತ್ತದೆ. ಅದರಲ್ಲಿ ಸುಣ್ಣದ ಅಂಶ ಕೂಡಿರುವುದರಿಂದ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ