ಬಾಯಿಯಿಂದ ಕಿಡ್ನಿ ಕಲ್ಲು ತೆಗೆಯುವ ಅಜ್ಜಿ!

WD
ರಹಸ್ಯ, ರೋಚಕತೆಯ ಅದ್ಭುತ ಪಯಣ ನಮ್ಮನ್ನು ಸುತ್ತಾಡಿಸುತ್ತಾ ಕೊನೆಗೆ ಮಧ್ಯಪ್ರದೇಶದ ಉಜ್ಜಯಿನಿ ಬಳಿ ಇರುವ ಒಂದು ಕುಗ್ರಾಮಕ್ಕೆ ತಂದು ನಿಲ್ಲಿಸಿದೆ. ವೈದ್ಯ ವಿಜ್ಞಾನಕ್ಕೆ ಸವಾಲೆಸೆಯುವ ರೀತಿಯಲ್ಲಿ ಈ ಗ್ರಾಮದ ವೃದ್ಧೆಯೊಬ್ಬಳು ರೋಗಿಯ ದೇಹದಲ್ಲಿ ಅಡಗಿರುವ ಕಲ್ಲುಗಳನ್ನು ತನ್ನ ಬಾಯಿಯಿಂದ ಹೊರತೆಗೆಯುತ್ತಾಳೆ ಎಂದು ಕೇಳಿದ್ದೆವು.

ಇತ್ತ ನಂಬುವಂತೆಯೂ ಇಲ್ಲ, ಅತ್ತ ಬಿಡುವಂತೆ ಕೂಡ ಇಲ್ಲ. ಸರಿ ಪರೀಕ್ಷೆ ಮಾಡಿಯೇ ಬಿಡೋಣ ಎಂದು ತೀರ್ಮಾನಿಸಿ ನಾವು ಈ ಪ್ರಯಾಣ ಆರಂಭಿಸಿದ್ದೆವು.

ಕಿಡ್ನಿ ಕಲ್ಲುಗಳನ್ನು ಬಾಯಿಯಿಂದಲೇ ಹೀರಿ ತೆಗೆಯುವ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

WD
ಉಜ್ಜಯಿನಿ ನಗರವನ್ನು ದಾಟಿದ ತುಸು ಹೊತ್ತಿನಲ್ಲಿ ಯಾರಾನ್ನಾದರೂ ರಲಾಯತ್ ಗ್ರಾಮಕ್ಕೆ ಹೋಗುವ ದಾರಿಯ ವಿವರ ಕೇಳಿದ್ದರೆ ಸರಿ ಇತ್ತೇನೊ ಅನ್ನಿಸಿತು. ನಮ್ಮ ಅದೃಷ್ಟಕ್ಕೆ ದಾರಿಯಲ್ಲಿ ಒಬ್ಬ ರೈತ ಹೊರಟಿದ್ದ. ಅವನನ್ನು ಗ್ರಾಮದ ರಸ್ತೆಯ ಬಗ್ಗೆ ಕೇಳಿದರೆ ಕಲ್ಲು ತೆಗೆಸಬೇಕಾ ಎಂದು ಉಲ್ಟಾ ನಮ್ಮನ್ನೆ ಪ್ರಶ್ನೆ ಕೇಳಬೇಕೆ! ನಮ್ಮಿಂದ ಕೂಡ ಉತ್ತರ ಹೌದು ಎನ್ನುವಂತೆ ಬಂತೆನ್ನಿ. ಇಲ್ಲದೆ ಇದ್ದರೆ ಇಲ್ಲದ ತಲೆಹರಟೆಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಹೌದು ಸ್ವಾಮಿ ಎಂದು ಬೂಸಿ ಬಿಟ್ಟಿದ್ದೆವು.

ಎದುರು ಇರುವ ರಸ್ತೆಯಲ್ಲಿ ಮುಂದೆ ಹೋಗಿ ದಾರಿಯಲ್ಲಿ ಯಾರನ್ನಾದರೂ ಕೇಳಿದರೆ ಸರಿಯಾಗಿ ದಾರಿ ತೋರಿಸುತ್ತಾರೆ ಎಂದು ಅಂದವನೇ ತನ್ನ ದಾರಿ ತಾನು ಹಿಡಿದು ಮುಂದೆ ಹೋದ. ಅವನು ಹೇಳಿದ ದಾರಿಯನ್ನು ಸ್ವಲ್ಪ ಕ್ರಮಿಸುವಷ್ಟರಲ್ಲಿ ಸೀತಾಬಾಯಿ ಅನ್ನುವ ವೃದ್ಧ ಹೆಂಗಸಿನ ಮುಂದೆ ಬಿಟ್ಟ ಕಣ್ಣು ಬಿಟ್ಟು ಹಾಗೆ ಕುಳಿತದ್ದಾಗಿತ್ತು.

ಶಸ್ತ್ರಚಿಕಿತ್ಸೆ ಇಲ್ಲದೆಯೇ ದೇಹದಿಂದ ನಿಗೂಢ ರೀತಿಯಲ್ಲಿ ಕಲ್ಲುಗಳನ್ನು ಹೊರತೆಗೆಯುವ ಮೂಲಕ ಗುಣಮುಖರಾಗಬಹುದು ಎಂಬುದನ್ನು ನೀವು ನಂಬುತ್ತೀರಾ? ಇಲ್ಲಿ ಚರ್ಚಿಸಿ.

WD
ದುರ್ಗಾಮಾತೆಯ ಪ್ರಾಂಗಣದಲ್ಲಿ ನೆರೆದಿದ್ದ ಆ ಭಾರಿ ಜನರು ಮತ್ತು ನಮ್ಮ ನಡುವೆ ಕುಳಿತ ಆ ವೃದ್ಧೆ ತಲ್ಲೀನತೆಯಿಂದ ತನ್ನ ಕೆಲಸದಲ್ಲಿ ಮಗ್ನಳಾಗಿದ್ದಳು. ರೋಗಿಯನ್ನು ನೆಲದ ಮೇಲೆ ಮಲಗಿಸುವುದು... ಎಲ್ಲಿ ನೋವಾಗುತ್ತಿದೆ ಎಂದು ಕೇಳುವುದು... ಮತ್ತು ನೋವಿರುವ ಜಾಗವನ್ನು ನಿಧಾನವಾಗಿ ನೀವುತ್ತ ತನ್ನ ಬಾಯಿಯಿಂದ ಕಲ್ಲುಗಳನ್ನು ತೆಗೆದು ರೋಗಿಯ ಕೈಗೆ ಇಡುವ ಕಾರ್ಯ ನಿರಂತರವಾಗಿ ಸಾಗಿತ್ತು!

ಸ್ವಲ್ಪ ಹೊತ್ತು ಕಳೆದ ನಂತರ ಸೀತಾಬಾಯಿಗೆ ವಿಶ್ರಾಂತಿ ಸಿಕ್ಕಂತಾಯಿತು. ಅದೇ ಅವಕಾಶಕ್ಕೆ ಕಾಯುತ್ತಿದ್ದ ನಾವು ಪಟ್ಟಂತ ಪ್ರಶ್ನೆ ಹಾಕಿದೆವು. ಉತ್ತರ ಕೂಡ ಅದೇ ಧಾಟಿಯಲ್ಲಿ ಬಂತು. 18 ವರ್ಷದಿಂದ ಕಲ್ಲು ತೆಗೆಯುತ್ತಿದ್ದೇನೆ. “ನಾನೊಂದು ಶಕ್ತಿ, ಚಿಕಿತ್ಸೆಗೆ ಮೊದಲು ದೈವದ ಮೇಲೆ ದೃಢ ವಿಶ್ವಾಸ ಇರಲಿ. ಇಲ್ಲದೆ ಇದ್ದರೆ ಏನೂ ಆಗುವುದಿಲ್ಲ”… ಇಷ್ಟು ಹೇಳಿ ಮತ್ತೆ ರೋಗಿಗಳ ಉಪಚಾರದತ್ತ ಗಮನ ಹರಿಸಿದಳು.

WD
ಸೀತಾಬಾಯಿಯಿಂದ ಚಿಕಿತ್ಸೆ ಪಡೆದುಕೊಳ್ಳಲು ರಾಜಸ್ಥಾನ, ಕಾನ್ಪುರ, ಗ್ವಾಲಿಯರ್ಗಳಿಂದ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬರುತ್ತಾರೆ ಎಂದು ನಮಗೆ ಆಗಲೇ ಗೊತ್ತಾಗಿದ್ದು. 75 ವರ್ಷದ ವೃದ್ಧೆ ಭಗವಾನ್ ದೇವಿ ಇಳಿ ವಯಸ್ಸಿನಲ್ಲಿ ಕಿಡ್ನಿ ಆಪರೇಷನ್ ಮಾಡಿಸಿಕೊಳ್ಳಲು ಸಾಧ್ಯವಾಗದೆ, ಸೀತಾಬಾಯಿಯ ಚಿಕಿತ್ಸೆಗೆಂದು ಜೈಪುರದಿಂದ ಬಂದಿದ್ದಳು.

ಕಿಡ್ನಿ ಕಲ್ಲುಗಳನ್ನು ಬಾಯಿಯಿಂದಲೇ ಹೀರಿ ತೆಗೆಯುವ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ಸೀತಾಬಾಯಿ ಕಲ್ಲು ತೆಗೆಯುವಾಗ ಏನೋ ಒಂಥರಾ ಎಳೆತ ಹೊಟ್ಟೆಯಲ್ಲಿ ಆಯಿತು. ಮುಂದಿನ ತಿಂಗಳು ಮತ್ತೆ ಬರಬೇಕು ಎಂದು ಹೇಳಿದ್ದಾಳೆ. ಆಮೇಲೆ ಸೋನೊಗ್ರಫಿ ಮಾಡಿಸಿ ಕಲ್ಲುಗಳು ಇನ್ನೂ ಉಳಿದಿವೆಯೋ ಇಲ್ಲವೋ ಅಂತ ನೋಡಬಹುದು ಎಂದು ಸೀತಾಬಾಯಿ ಹೇಳಿದ್ದಾಗಿ ಭಗವಾನ್ ದೇವಿ ನಮಗೆ ತನ್ನ ಚಿಕಿತ್ಸೆಯ ವಿವರ ನೀಡಿದಳು.

ಗ್ವಾಲಿಯರ್ದಿಂದ ಬಂದಿದ್ದ ಮನೋಜ್ ಕೂಡ ಊರಿಗೆ ಮರಳಿದ ನಂತರ ಆಲ್ಟ್ರಾ ಸೌಂಡ್ ಮಾಡಿಸಿಕೊಳ್ಳುವುದಿದೆ ಎಂದು ಆತಂಕದ ಖುಷಿಯಲ್ಲಿದ್ದನು.

ಶಸ್ತ್ರಚಿಕಿತ್ಸೆ ಇಲ್ಲದೆಯೇ ದೇಹದಿಂದ ನಿಗೂಢ ರೀತಿಯಲ್ಲಿ ಕಲ್ಲುಗಳನ್ನು ಹೊರತೆಗೆಯುವ ಮೂಲಕ ಗುಣಮುಖರಾಗಬಹುದು ಎಂಬುದನ್ನು ನೀವು ನಂಬುತ್ತೀರಾ? ಇಲ್ಲಿ ಚರ್ಚಿಸಿ.

WD
ಅಲ್ಲಿ ಸೀತಾಬಾಯಿ ತನ್ನ ಕೆಲಸದಲ್ಲಿ ನಿರತಳಾಗಿದ್ದರೆ ಇತ್ತ ನಾವು ಕೂಡ ತನಿಖೆಯನ್ನು ಕೈಗೆತ್ತಿಕೊಂಡಾಗಿತ್ತು. ಅಲ್ಲಿದ್ದವರನ್ನು ಸೀತಾಬಾಯಿಯ ಕೆಲಸದ ಬಗ್ಗೆ ವಿಚಾರಿಸಿ ಸಾಕಷ್ಟು ವಿವರವನ್ನು ಕಲೆಹಾಕುವುದರತ್ತ ನಮ್ಮ ಗಮನ ಕೇಂದ್ರೀಕೃತವಾಗಿತ್ತು.

ಸೀತಾಬಾಯಿ ತನ್ನ ರೋಗಿಗಳ ಉಪಚಾರ ಮುಗಿಸಿದ್ದೇ ತಡ, ಇವಳ ಮುಖದ ಭಾವನೆಗಳು ಬದಲಾಗಿ ಹೋಗಿದ್ದು ನಮ್ಮನ್ನು ಹೈರಾಣ ಮಾಡಿತು. ಆಗ ಪ್ರಶ್ನೆ ಕೇಳಿದರೆ ಉರಿದು ಬೀಳುತ್ತಿದ್ದ ಸೀತಾಬಾಯಿ, ಈಗ ನೋಡಿದರೆ ಪಕ್ಕಾ ಹಳ್ಳಿಯ ಅಜ್ಜಿ. ಇದೆಲ್ಲ ಹೇಗೆ ಅಂತ ಕೇಳಿದರೆ, ಬೊಚ್ಚು ಬಾಯಿಯನ್ನು ಇಷ್ಟಗಲ ಮಾಡಿ, “ನನಗೇನೂ ಗೊತ್ತಿಲ್ಲ. 18 ವರ್ಷದಿಂದ ಇದು ಹೀಗೆ ನಡೆದಿದೆ. ಒಂದು ಮಾತ್ರ ಸತ್ಯ ನಾನು ಹುಡುಗಿಯಾಗಿದ್ದಾಗಿನಿಂದಲೂ ದುರ್ಗಾದೇವಿಯ ಉಪಾಸಕಿ. ಇದೆಲ್ಲ ಅವಳ ಮಹಿಮ” ಎಂದು ಆಕಾಶದತ್ತ ಬೊಟ್ಟು ಮಾಡುತ್ತಾಳೆ.

ಕಿಡ್ನಿ ಕಲ್ಲುಗಳನ್ನು ಬಾಯಿಯಿಂದಲೇ ಹೀರಿ ತೆಗೆಯುವ ಕುರಿತ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.

ವೈದ್ಯರೇನನ್ನುತ್ತಾರೆ? :
ಕಿಡ್ನಿಕಲ್ಲುಗಳನ್ನು ಹಾಗೆಯೇ ಅದೂ ಇನ್ನೊಬ್ಬರ ಬಾಯಿಯಿಂದ ತೆಗೆಯುವುದಕ್ಕೆ ಸಾಧ್ಯವಿಲ್ಲ. ಸಣ್ಣ ಕಲ್ಲುಗಳಿದ್ದರೆ ಮೂತ್ರದ ಮೂಲಕ ತನ್ನಿಂದ ತಾನೇ ಹೊರಗೆ ಹೋಗುತ್ತವೆ. ದೊಡ್ಡ ಗಾತ್ರದ ಕಲ್ಲುಗಳಿಗೆ ಆಪರೇಷನ್ ಆಗಬೇಕು. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದರೆ ಔಷಧೋಪಚಾರ ಸಾಕು ಎನ್ನುವುದು ಡಾ.ಅಪೂರ್ವ ಚೌಧುರಿ ಅಭಿಪ್ರಾಯ.

WD
ಆದರೆ ಕಲ್ಲುಗಳ ನೋವಿನ ಯಮಯಾತನೆಯನ್ನು ಅನುಭವಿಸಿದವರಿಗೇ ಗೊತ್ತು ಸೀತಾಬಾಯಿಯ ಕೈಚಳಕ ಏನು ಎನ್ನುವುದು! ಅವರು ಡಾ.ಚೌಧುರಿ ಅಭಿಪ್ರಾಯವನ್ನು ನೀವಾಳಿಸಿ ಒಗೆದು ಬಿಡುತ್ತಾರೆ. ಯಾವುದನ್ನು ನಂಬಬೇಕು ಬಿಡಬೇಕು ಅನ್ನುವ ದೊಡ್ಡ ಗೊಂದಲ ನಮ್ಮ ಮೇಲೆ. ಓದಿದವರು ಅನ್ನಿಸಿಕೊಂಡವರು ಹೀಗೆ ಇದ್ದಬಿದ್ದದನ್ನು ನಂಬಲಿಕ್ಕಾಗುತ್ತಾ ? ಕಣ್ಣಾರೆ ನೋಡಿದ ಮೇಲಾದರೂ ನಂಬಲೇಬೇಕು!

ಇದು ಶುರುವಾಗಿದ್ದು ಹೇಗೆ ? :
ಅಸಲು ಸೀತಾಬಾಯಿಗೇ ಇದು ಗೊತ್ತಿಲ್ಲ. ಚಿಕ್ಕವಳಿದ್ದಾಗ ದುರ್ಗಾದೇವಿಯ ಪೂಜೆ ಮಾಡುತ್ತಿದ್ದಳಂತೆ. 18 ವರ್ಷದಿಂದ ಕಲ್ಲು ತೆಗೆಯುತ್ತಿದ್ದೇನೆ. ಬೇರೆಯವರಿಗೆ ಕಲಿಸಲು ಇದು ವಿದ್ಯೆ ಅಲ್ಲ, ಎಲ್ಲ ದೇವಿಯ ಕೃಪೆ, ಅವಳು ಮಾಡಿಸುತ್ತಾಳೆ, ನಾನು ಮಾಡುತ್ತಿದ್ದೇನೆ ಅಂತ ಎಲ್ಲ ಮುದುಕಿಯರ ಹಾಗೆ ಕೈಯೆತ್ತಿಬಿಟ್ಟಳು.

ಶಸ್ತ್ರಚಿಕಿತ್ಸೆ ಇಲ್ಲದೆಯೇ ದೇಹದಿಂದ ನಿಗೂಢ ರೀತಿಯಲ್ಲಿ ಕಲ್ಲುಗಳನ್ನು ಹೊರತೆಗೆಯುವ ಮೂಲಕ ಗುಣಮುಖರಾಗಬಹುದು ಎಂಬುದನ್ನು ನೀವು ನಂಬುತ್ತೀರಾ? ಇಲ್ಲಿ ಚರ್ಚಿಸಿ.