ತೆಂಗಿನಕಾಯಿ ಒಡೆಯುವುದಕ್ಕೂ ನಾನಾ ಅರ್ಥಗಳಿವೆ!

ಶುಕ್ರವಾರ, 16 ಜೂನ್ 2017 (11:07 IST)
ಬೆಂಗಳೂರು: ದೇವಸ್ಥಾನಕ್ಕೆ ಹೋದರೆ ಹಣ್ಣು ಕಾಯಿ ಮಾಡಿಸುವುದು ಸಾಮಾನ್ಯ. ಹೀಗೆ ದೇವರಿಗೆ ತೆಂಗಿನ ಕಾಯಿ ಅರ್ಪಿಸುವುದರ ಹಿಂದೆ ಹಲವು ಅರ್ಥಗಳಿವೆ.

 
ಶುದ್ಧ ಮನಸ್ಸಿನಿಂದ ಅರ್ಪಿಸಿದರೆ, ಯಾವುದೇ ವಸ್ತುವನ್ನು ದೇವರು ಸ್ವೀಕರಿಸುತ್ತಾನೆ ಎಂಬ ನಂಬಿಕೆಯಿದೆ. ತೆಂಗಿನ ಕಾಯಿ ಒಡೆಯುವಾಗ ಒಳಗೆ ಹಾಳಾಗಿದ್ದರೆ ಅಪಶಕುನ ಎನ್ನಲಾಗುತ್ತದೆ. ನಾವು ಮಾಡುವ ಸೇವೆಯಲ್ಲಿ ಏನೋ ದೋಷವಿದೆ ಎಂದು ಇದರ ಅರ್ಥ.

ಕಾಯಿ ಒಡೆಯುವಾಗ ಅದು ಛಿದ್ರವಾದರೆ ದೇವರಿಗೆ ಇನ್ನೂ ನಮ್ಮ ಹರಕೆ ಬಾಕಿಯಿದೆ ಎಂಬ ಅರ್ಥ. ಸರಿಯಾಗಿ ಎರಡು ಭಾಗವಾದರೆ ಶುಭಶಕುನ, ದೇವರಿಗೆ ನಮ್ಮ ಪ್ರಾರ್ಥನೆ ಸಂದಿದೆ ಎಂದರ್ಥ. ಹಾಗಂತ ಎಲ್ಲಾ ಸಂದರ್ಭದಲ್ಲೂ ಇದು ಅನ್ವಯವಾಗುವುದಿಲ್ಲ.

ಎಳೆಯ ತೆಂಗಿನ ಕಾಯಿ ತಂದು ಒಡೆದರೆ ಅದು ಸರಿಯಾಗಿ ಭಾಗವಾಗುವುದಿಲ್ಲ. ಅದಕ್ಕೆಲ್ಲಾ ನಾನಾ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ತೆಂಗಿನಕಾಯಿ ಒಡೆಯುವುದೂ ಒಂದು ಕಲೆಯೇ!

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ