ಯಾವ ದೇವರನ್ನು ಯಾವುದರಿಂದ ಆರಾಧಿಸಿದರೆ ಸಂತುಷ್ಟರಾಗುತ್ತಾರೆ?

ಮಂಗಳವಾರ, 7 ಮಾರ್ಚ್ 2017 (10:34 IST)
ಬೆಂಗಳೂರು:  ಒಬ್ಬೊಬ್ಬ ದೇವರಿಗೂ ಒಂದೊಂದು ರೀತಿಯಲ್ಲಿ ಆರಾಧಿಸಿದರೆ ಸಂತುಷ್ಟರಾಗುತ್ತಾರೆ. ಯಾವ ದೇವರಿಗೆ ಯಾವ ರೀತಿ ಸಂತುಷ್ಟಗೊಳಿಸಬೇಕು? ನೋಡೋಣ.

 
ಅಂಕಾರ ಪ್ರಿಯೋ ವಿಷ್ಣುಃ, ಅಭಿಷೇಕ ಪ್ರಿಯಃ ಶಿವಃ ನಮಸ್ಕಾರಪ್ರಿಯೋ ಭಾನುಃ  ಎಂಬ ಶ್ಲೋಕದಂತೆ ವಿಷ್ಣು ಅಲಂಕಾರ ಪ್ರಿಯ. ಶಿವ ಅಭಿಷೇಕ ಪ್ರಿಯ. ಸೂರ್ಯ ದೇವ ನಮಸ್ಕಾರ ಪ್ರಿಯ.

ಪರಮೇಶ್ವರನನ್ನು ಆರಾಧಿಸಲು ಯಾವುದೇ ನಿರ್ಬಂಧಗಳಿಲ್ಲ. ಓಂ ನಮಃ ಶಿವಾಯ ಎಂಬ ನಾಮದೊಂದಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಿದರೆ ಶಿವ ಸಂತುಷ್ಟನಾಗುತ್ತಾನೆ. ಬಿಲ್ವದ ಅರ್ಚನೆ, ಧೂಪ ದೀಪದೊಂದಿಗೆ ನೈವೇದ್ಯ ಬಿಟ್ಟು ಶಿವ ಬೇರೇನೂ ಕೇಳನು.

ವಿಷ್ಣು ದೇವರಿಗೆ ಕಿಸ್ಕಾರ, ತುಳಸಿ ಮಾಲೆ ಹಾಗೂ ಬಗೆ ಬಗೆಯ ಹೂಗಳಿಂದ ಅಲಂಕರಿಸಿದರೆ ಸಂತುಷ್ಟನಾಗುತ್ತಾನೆ. ಸೂರ್ಯ ದೇವರಿಗೆ ಬೆಳಿಗ್ಗೆ, ಸಂಜೆ ಶುದ್ಧ ಮನಸ್ಸಿನಿಂದ ನಮಸ್ಕಾರ ಮಾಡುವುದೇ ದೊಡ್ಡ ಪೂಜೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ