ಗಾಯತ್ರಿ ಮಂತ್ರವನ್ನು ಸ್ತ್ರೀಯರು ಹೇಗೆ ಹೇಳಬೇಕು?

ಗುರುವಾರ, 9 ಮಾರ್ಚ್ 2017 (10:04 IST)
ಬೆಂಗಳೂರು: ಗಾಯತ್ರಿ ಮಂತ್ರಕ್ಕಿಂತ ಶ್ರೇಷ್ಠವಾದುದು ಬೇರೊಂದಿಲ್ಲ ಎಂದು ಆದಿಕಾಲದಲ್ಲಿ ವಿಶ್ವಾಮಿತ್ರ ಮುನಿಯೇ ಹೇಳಿದ್ದನಂತೆ. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ದಿವ್ಯಮಂತ್ರವಾಗಿದೆ.

 
ಓಂ  ಭೂರ್ಭುವಃ ಸ್ವಃ ಎಂದು ಆರಂಭವಾಗುವ ಮಂತ್ರವನ್ನು ಸ್ತ್ರೀಯರು ಮಂತ್ರದಂತೆ ಹೇಳಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಸ್ತ್ರೀಯರು ಇದನ್ನು ಮಂತ್ರದಂತೆ ಹೇಳಿದರೆ ಗರ್ಭಕೋಶದ ಸಮಸ್ಯೆ ಬರುತ್ತದೆಂಬ ನಂಬಿಕೆ ಇದೆ.

ಹಾಗಿದ್ದರೆ, ಇದನ್ನು ಹೇಗೆ ಉಚ್ಛರಿಸಬೇಕು? ಸ್ತ್ರೀಯರು ಇದನ್ನು ಸ್ವರ ಸಹಿತವಾಗಿ ಮಂತ್ರದಂತೆ ಹೇಳುವಂತಿಲ್ಲ. ಆದರೆ ಪದ್ಯ ರೂಪದಲ್ಲಿ ಹೇಳಬಹುದು ಎನ್ನಲಾಗುತ್ತದೆ. ವೇದಾನಾಂ ಸಾಮವೇದೋಸ್ಮಿ ಎಂದಿದ್ದನಂತೆ ಭಗವಾನ್ ಶ್ರೀಕೃಷ್ಣ. ಅಂದರೆ, ವೇದ ಮಂತ್ರದಲ್ಲಿ ಸ್ವರವಾಗಿ ನಾನಿರುತ್ತೇನೆ ಎಂದರ್ಥ. ಈ ಗಾಯತ್ರಿ ಮಂತ್ರವನ್ನು ಸ್ವರ ಸಹಿತವಾಗಿ ಹೇಳಿದರೆ ಫಲ ಹೆಚ್ಚು ಎಂಬ ನಂಬಿಕೆಯಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ