ಬೆಂಗಳೂರು: ಶಿವ ದೇಗುಲಕ್ಕೆ ಹೋದರೆ ಶಿವ ಲಿಂಗದ ಮೇಲೆ ಪಾತ್ರೆಯಿಂದ ಹನಿ ನೀರು ಶಿವಲಿಂಗಕ್ಕೆ ಬೀಳುತ್ತಿರುವುದನ್ನು ನೋಡುತ್ತೇವೆ. ಶಿವಲಿಂಗಕ್ಕೆ ನೀರು ಬೀಳುತ್ತಿರುವುದು ಯಾಕೆ?
ಸಮುದ್ರ ಮಥನದಲ್ಲಿ ಹೊರಹೊಮ್ಮಿದ ವಿಷ ಕುಡಿದು ಶಿವ ಹಾಲಾಹಲನಾದ. ಆಗ ವಿಷ ಶಿವನ ಕಂಠದಲ್ಲಿ ಉಳಿದು ವಿಷ ಕಂಠನಾದ. ವಿಷವೆಂದರೆ ಅದು ಜ್ವಾಲೆ, ಉರಿಯಂತೆ. ಅದನ್ನು ಕಡಿಮೆ ಮಾಡಬೇಕಾದರೆ ನೀರಿನ ಸಿಂಚನವಾಗಬೇಕು.
ಅದೇ ರೀತಿ ಶಿವ ದೇವರಿಗೆ ಕೋಪ ಜಾಸ್ತಿ. ಕೋಪ ಕಡಿಮೆಯಾಗಬೇಕಾದರೆ ನೆತ್ತಿ ಮೇಲೆ ನೀರು ಬಿದ್ದು ತಂಪಾಗಬೇಕು. ಈ ನೀರು ಹರಿದು ಉತ್ತರ ದಿಕ್ಕಿನತ್ತ ಸಾಗುವುದು. ಇದನ್ನು ನಾವು ಸ್ವೀಕರಿಸಿದರೆ ನಮ್ಮಲ್ಲಿರುವ ನಮ್ಮಲ್ಲಿರುವ ಪಾಪ ಕಳೆಯುತ್ತದೆ ಎನ್ನುವ ನಂಬಿಕೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ