ಯುಗಾದಿ ಹಬ್ಬದ ಧಾರ್ಮಿಕ ಮಹತ್ವ

ಬುಧವಾರ, 29 ಮಾರ್ಚ್ 2017 (08:10 IST)
ಬೆಂಗಳೂರು: ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಹೊಸ ವರ್ಷಾರಂಭ. ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಚಂದ್ರಮಾನ ಯುಗಾದಿ ಆಚರಣೆಯಿದೆ. ಇದರ ಹಿನ್ನಲೆಯೇನು ನೋಡೋಣ.


 
ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ವಧಿಸಿ ಲಂಕೆಗೆ ಮರಳಿ ಬಂದ ದಿನ ಇದು. ಅದೇ ದಿನವನ್ನು ಯುಗಾದಿ ಹಬ್ಬದ ದಿನವಾಗಿ ಆಚರಿಸಲಾಗುತ್ತದೆ ಎಂಬ ನಂಬಿಕೆಯಿದೆ.  ಅಲ್ಲದೆ ಇಂದಿನ ದಿನವೇ ಮಹಾವಿಷ್ಣು ಮತ್ಸ್ಯಾವತಾರ ತಾಳಿದನೆಂಬುದು ಪ್ರತೀತಿ. ಆದರೆ ಇದರಲ್ಲಿ ಚಂದ್ರಮಾನ ಮತ್ತು ಸೌರಮಾನ ಯುಗಾದಿ ಎಂಬ ಎರಡು ಬೇಧಗಳಿವೆ.

 
ಕರ್ನಾಟಕ ಮತ್ತು ಆಂಧ್ರಪ್ರದೇಶ ಹಾಗೂ ಉತ್ತರ ಭಾರತದ ಹಲವೆಡೆ ಚಂದ್ರಮಾನ ಯುಗಾದಿ ಆಚರಿಸಲಾಗುತ್ತದೆ. ಆದರೆ ತಮಿಳುನಾಡು ಮತ್ತು ಕೇರಳದಲ್ಲಿ ಸೌರಮಾನ ಯುಗಾದಿ ಅಂದರೆ, ವಿಷು ಹಬ್ಬವನ್ನು ಹೊಸ ವರ್ಷಾಚರಣೆಯ ದಿನವನ್ನಾಗಿ ಆಚರಿಸಲಾಗುತ್ತದೆ.

 
ಇಂದಿನಿಂದ ವಸಂತ ಮಾಸ ಪ್ರಾರಂಭವಾಗುತ್ತದೆ. ಗಿಡ ಮರಗಳು ಹೊಸ ಚಿಗುರು ಪಡೆಯಲು ಪ್ರಾರಂಭವಾಗುತ್ತದೆ. ಈ ಹೊಸ ವರ್ಷವನ್ನು ಬೇವು-ಬೆಲ್ಲ ತಿನ್ನುವುದರ ಮೂಲಕ ಜೀವನದಲ್ಲಿ ಸಿಹಿ-ಕಹಿ ಎರಡೂ ಸಮಾನವಾಗಿರುವುದರ ಸಂಕೇತವಾಗಿ ಸ್ವೀಕರಿಸಬೇಕೆಂಬ ಸಂದೇಶ ನೀಡಲಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ