ಬೆಂಗಳೂರು: ಒಬ್ಬೊಬ್ಬ ದೇವರಿಗೆ ಒಂದೊಂದು ವಸ್ತುಗಳು ಪ್ರಿಯ. ಗಣೇಶ ಮೋದಕ ಪ್ರಿಯ, ಮಹಾವಿಷ್ಣುವಿನ ಆರಾಧನೆಗೆ ತುಳಸಿ ಬೇಕು ಎನ್ನಲಾಗುತ್ತದೆ. ಹಾಗೇ ಶಿವನನ್ನು ಅರ್ಚಿಸಲು ಬಿಲ್ವ ಪತ್ರೆ ಬೇಕೇ ಬೇಕು.
ಬಿಲ್ವ ಪತ್ರೆ ಶಿವನಿಗೆ ಅತ್ಯಂತ ಪ್ರಿಯವಾದುದು. ಹಾಗಾಗಿ ಶಿವಾಲಯಗಳಲ್ಲಿ ಬಿಲ್ವ ಪತ್ರೆ ಇದ್ದೇ ಇರುತ್ತದೆ. ಶಿವಾಲಯಗಳಲ್ಲಿ ಬಿಲ್ವ ಪತ್ರೆ ಪೂಜೆಗೆ ಯೋಗ್ಯ.
ಬಿಲ್ವ ಪತ್ರೆಯ ಮುಳ್ಳು ಶಕ್ತಿಯ ಸಂಕೇತ, ಕೊಂಬೆಗಳು ವೇದಗಳನ್ನು, ಬೇರುಗಳು ರುದ್ರನನ್ನು ಸೂಚಿಸುವುದು. ಬಿಲ್ವ ಪತ್ರೆಯ ಮೂರು ಎಲೆಗಳು ಸತ್ವ, ರಜೋ, ತಮೋ ಗುಣಗಳನ್ನು ಸೂಚಿಸುತ್ತದೆ. ಇದನ್ನು ಶಿವನ ಮೂರು ಕಣ್ಣುಗಳ ಪ್ರತೀಕ.
ಬಿಲ್ವದ ಎಲೆಗಳಿಂದ ಶಿವನನ್ನು ಪೂಜಿಸಿದರೆ ಪಾಪನಾಶವೆಂದು ನಂಬಿಕೆ. ಇದರ ಪ್ರತಿ ಭಾಗವೂ ಔಷಧೀಯ ಗುಣವನ್ನು ಹೊಂದಿದೆ. ವಾತ, ಕೀಲು ವಾತ, ಬೇಧಿ, ಕ್ಷಯ ರೋಗಗಳಿಗೆ ಇದರ ಔಷಧಿ ಪರಿಣಾಮಕಾರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ