ಬೆಂಗಳೂರು: ಕ್ಷೌರ ಮಾಡುವ ಹಾಗೆ ವಾರಕ್ಕೊಮ್ಮೆಯಾದರೂ ಉಗುರು ತೆಗೆಯಲೇಬೇಕು. ಉಗುರು ಎಲ್ಲಿ ತೆಗೆಯಬೇಕು ಎನ್ನುವುದಕ್ಕೂ ನಿಯಮವಿದೆ.
ಮನೆಯೊಳಗೆ, ನಡೆದಾಡುವ ದಾರಿಯಲ್ಲಿ ಮತ್ತು ರಾತ್ರಿ ವೇಳೆ ಉಗುರು ತೆಗೆಯಬಾರದು ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಅದಕ್ಕೆ ಧಾರ್ಮಿಕ ಕಾರಣ ಮಾತ್ರವಲ್ಲ, ವೈಜ್ಞಾನಿಕ ಕಾರಣವೂ ಇದೆ.
ಮನೆಯೊಳಗೆ ಉಗುರು ತೆಗೆಯುವುದು ಅಶುಭ ಎನ್ನಲಾಗುತ್ತದೆ. ನಮ್ಮ ಉಗುರಿನ ಮೇಲೆ ಬೇರೆಯವರು ನಡೆದಾಡಿದರೆ, ಅದರಿಂದ ಅವರು ನಮ್ಮ ಶತ್ರುಗಳಾಗುತ್ತಾರೆ ಎಂಬ ಮೂಢನಂಬಿಕೆಯಿದೆ.
ಅದೆಲ್ಲಕ್ಕಿಂತ ಹೆಚ್ಚು ಮನೆ ಲಕ್ಷ್ಮಿಯ ಆವಾಸಸ್ಥಾನ ಎಂಬುದು ನಂಬಿಕೆ. ಅಂತಹ ಲಕ್ಷ್ಮಿ ಇರುವ ಸ್ಥಳದಲ್ಲಿ ರಾತ್ರಿ ವೇಳೆ ಉಗುರು ತೆಗೆದು ಅಶುಭ ಮಾಡಬಾರದು ಎಂದು ನಂಬಲಾಗುತ್ತದೆ.
ಅದಕ್ಕಿಂತ ಮುಖ್ಯವಾಗಿ ಸಿಕ್ಕ ಸಿಕ್ಕಲ್ಲಿ ಉಗುರು ಬಿಸಾಕುವುದರಿಂದ ಅದು ಆಹಾರದ ಮೂಲಕ ಉದರ ತಲುಪುವ ಸಾಧ್ಯತೆಯಿರುತ್ತದೆ. ಉಗುರು ಜೀರ್ಣವಾಗುವ ವಸ್ತುವಲ್ಲ. ಹಾಗಾಗಿ ಅದು ನಮ್ಮ ಆಹಾರ ಸೇರದಂತೆ ತಡೆಯಲು ಮನೆಯಿಂದ ಹೊರಗೆ ಉಗುರು ತೆಗೆಯಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ