ಬೆಂಗಳೂರು: ಹೋಳಿ ಹಬ್ಬ ಬಂತೆಂದರೆ ಸಾಕು. ಬಣ್ಣಗಳದ್ದೇ ನೆನಪು ಬರುತ್ತದೆ. ದೀಪಾವಳಿ ಬಿಟ್ಟರೆ ಮೋಜಿನ ಆಟ ಆಡುವುದು ಇದೇ ಹಬ್ಬದ ಸಂದರ್ಭದಲ್ಲೇ ಅನಿಸುತ್ತದೆ. ಆದರೆ ಬಣ್ಣದ ಒಕುಳಿ ಹರಿಸುವುದರ ಹಿಂದೆ ಒಂದು ಸಣ್ಣ ಕತೆಯಿದೆ.
ದ್ವಾಪರಯುಗದಲ್ಲಿ ಕೃಷ್ಣ ಬಾಲ್ಯದಲ್ಲಿದ್ದಾಗ ನಡೆದ ಘಟನೆಯದು. ಕೃಷ್ಣ ತನ್ನ ಸಾಕು ತಾಯಿ ಯಶೋದೆಗೆ ಸದಾ ಪ್ರಶ್ನೆ ಕೇಳುತ್ತಿದ್ದನಂತೆ. ಹೀಗಿರುವಾಗ ಒಂದು ದಿನ ನಾನೇಕೆ ಕಪ್ಪಗಿದ್ದೇನೆ. ರಾಧೆಯೇಕೆ ಬೆಳ್ಳಗಿದ್ದಾಳೆ ಎಂದು ಕೃಷ್ಣ ಮೊಂಡು ಹಠ ಮಾಡಿದನಂತೆ.
ಅದಕ್ಕೆ ತಾಯಿ ಯಶೋಧೆ ಚಿಂತೆ ಮಾಡಬೇಡ ಮಗನೇ. ನೀನು ರಾಧೆಯ ಮುಖಕ್ಕೆ ಬಣ್ಣ ಹಾಕು ಎಂದು ಉಪಾಯ ಹೇಳಿಕೊಟ್ಟಳಂತೆ. ಹಾಗೇ ಕೃಷ್ಣ ರಾಧೆಯ ಮುಖಕ್ಕೆ ಬಣ್ಣ ಬಳಿದನಂತೆ. ಪ್ರತಿಯಾಗಿ ರಾಧೆಯೂ ಹುಡುಗಾಟಿಕೆಯಿಂದ ಕೃಷ್ಣನ ಮುಖಕ್ಕೆ ಬಣ್ಣ ಮೆತ್ತಿದಳಂತೆ. ಹೀಗೇ ಅವರಿಬ್ಬರ ನಡುವೆ ಶುರುವಾದ ಬಣ್ಣದ ಓಕುಳಿಯಾಟ ಇಂದಿಗೂ ಮುಂದುವರಿದಿದೆ ಎನ್ನಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ