ಮಗುವಿಗೆ ದೃಷ್ಟಿ ನಿವಾಳಿಸುವುದು ಏಕೆ?

ಭಾನುವಾರ, 14 ಮೇ 2017 (12:29 IST)
ಬೆಂಗಳೂರು: ಮನೆಯಲ್ಲಿ ಚಿಕ್ಕ ಮಕ್ಕಳು ಕಾರಣವಿಲ್ಲದೇ ಅಳುತ್ತಿದ್ದರೆ, ಹೊರಗಡೆ ಹೋಗಿ ಬಂದರೆ ದೃಷ್ಟಿ ನಿವಾಳಿಸುತ್ತೇವೆ. ಇದು ಏಕೆ ಎಂದು ತಿಳಿಯೋಣ.

 
ಏಳೆಂಟು ಪೊರೆಕೆ ಕಡ್ಡಿ, ಮೆಣಸು, ಉಪ್ಪು ಮುಂತಾದ ವಸ್ತು ಕೈಯಲ್ಲಿ ಹಿಡಿದುಕೊಂಡು ನಾಯಿ ಕಣ್ಣು, ನಡಿ ಕಣ್ಣು ಎನ್ನುತ್ತಾ ದೃಷ್ಟಿ ತೆಗೆಯುತ್ತಾರೆ. ಹಲವು ಸಲ ಹೀಗೆ ಮಾಡಿದಾಗ ಮಗು ಅಳು ನಿಲ್ಲಿಸುವುದುಂಟು.

ಪೊರೆಕೆ ಕಡ್ಡಿ ಹೊತ್ತಿಸಿ ಮುಖದ ಬಳಿ ತಂದಾಗ ಮಗು ಬೆಚ್ಚಿ ಬೀಳಿಸಿದ ಘಟನೆಯನ್ನು ಮರೆಯುತ್ತದೆ. ಉಪ್ಪು, ಮೆಣಸು ಬೆಂಕಿಗೆ ತಗುಲಿದಾಗ ಅದರ ಚಟ ಚಟ ಶಬ್ಧಕ್ಕೆ ಮಗು ಅಳು ನಿಲ್ಲಿಸಿ ಧೈರ್ಯ ಮೂಡುತ್ತದೆ.

ಹಾಗೆಂದು ಹೊಟ್ಟೆ ನೋವು, ತಲೆ ನೋವು ಬಂದಾಗಲೂ ಇದೇ ರೀತಿ ಮಾಡಿ ದೃಷ್ಟಿ ತೆಗೆದರೆ ಅದು ಸರಿಯಾಗಬೇಕೆಂದೇನಿಲ್ಲ. ಎಲ್ಲಾ ಸಂದರ್ಭದಲ್ಲೂ ಈ ಪ್ರಯೋಗ ಯಶಸ್ವಿಯಾಗಲಾರದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ