ದೇವಸ್ಥಾನದ ಹೊರಗೆ ಚಪ್ಪಲಿ ಬಿಡುವುದೇಕೆ?

ಮಂಗಳವಾರ, 21 ಫೆಬ್ರವರಿ 2017 (11:19 IST)
ಬೆಂಗಳೂರು: ಯಾವುದೇ ದೇವಾಲಯಕ್ಕೆ ಹೋದರೂ, ಚಪ್ಪಲಿ ಹೊರಗೆ ಬಿಡಬೇಕು. ಹೆಚ್ಚೇಕೆ ಹಿಂದೂ ಸಂಪ್ರದಾಯದಲ್ಲಿ ಮನೆಯ ಒಳಗೂ ಚಪ್ಪಲಿ ಹಾಕಬಾರದು. ನಾವ್ಯಾಕೆ ದೇವಸ್ಥಾನ ಮನೆಯೊಳಗೆ ಚಪ್ಪಲಿ ಹೊರಗೇ ಬಿಡಬೇಕು?

 
ಚಪ್ಪಲಿ ಎನ್ನುವುದು ಅಹಂಕಾರದ ಸಂಕೇತವಂತೆ. ದೇವಾಲಯದಲ್ಲಿ ದೇವರ ದರ್ಶನಕ್ಕೆ ಹೋಗುವಾಗ ನಮ್ಮಲ್ಲಿರುವ ಅಹಂಕಾರವನ್ನೆಲ್ಲಾ ಬಿಟ್ಟು, ಕೇವಲ ನಾನೊಬ್ಬ ಸಾಮಾನ್ಯ ಎಂಬ ಭಾವನೆಯಿಂದ ಹೋಗಬೇಕು.

ಮನೆಯೊಳಗೂ ದೇವರ ವಾಸ ಸ್ಥಾನವಿದೆ. ಇದೇ ಕಾರಣಕ್ಕೆ ಮನೆ ಮತ್ತು ದೇವಾಲಯದ ಒಳಗೆ ಹೋಗುವಾಗ ಚಪ್ಪಲಿ ಹೊರಗಡೆ ಇಟ್ಟೇ ಹೋಗಬೇಕು ಎಂದು ನಿಯಮ ಮಾಡುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ