ದಾನ, ದಕ್ಷಿಣೆ ಕೊಡುವಾಗ ತುಳಸಿ ದಳ ಯಾಕೆ?

ಬುಧವಾರ, 10 ಮೇ 2017 (07:32 IST)
ಬೆಂಗಳೂರು: ನಮ್ಮಲ್ಲಿ ಒಂದು ಪದ್ಧತಿಯಿದೆ. ಪುರೋಹಿತರಿಗೆ ದಕ್ಷಿಣೆ ಕೊಡುವಾಗ ವೀಳ್ಯದೆಲೆ, ಅಡಿಕೆ ಜತೆಗೆ ಒಂದು ತುಳಸಿ ದಳವನ್ನೂ ಇಟ್ಟು ನೀರೆರೆದು ನೀಡುತ್ತಾರೆ. ತುಳಸಿ ದಳ ಯಾಕೆ? ಅದರ ಮಹತ್ವವೇನು ತಿಳಿದುಕೊಳ್ಳೋಣ.

 
ಒಮ್ಮೆ ಶ್ರೀಕೃಷ್ಣ ಪರಮಾತ್ಮನ ತುಲಾಭಾರದಲ್ಲಿ ಏನೆಲ್ಲಾ ವಸ್ತುಗಳನ್ನಿಟ್ಟರೂ ತಕ್ಕಡಿ ಸಮನಾಗಲಿಲ್ಲವಂತೆ. ಕೊನೆಗೆ ಒಂದು ತುಳಸಕ ದಳ ಇಟ್ಟಾಗ ತಕ್ಕಡಿ ಕೆಳಗೆ ಬಂತಂತೆ. ಅರ್ಥಾತ್, ಎಲ್ಲಾ ಧನ, ಧಾನ್ಯಗಳಿಗಿಂತಲೂ ಮಿಗಿಲಾದುದು ತುಳಸಿ ದಳ ಎಂದಾಯಿತು.

ದಾನ ಧರ್ಮ ಮಾಡುವಾಗ ಪ್ರೀತಿಯಿಂದ ಮಾಡಬೇಕು. ನಮ್ಮಲ್ಲಿರುವುದು ಅತ್ಯಲ್ಪವಾದರೂ, ಅದನ್ನು ನೀಡುವಾಗ ಪ್ರೀತಿಯಿಂದಲೇ ನೀಡಬೇಕು. ಹಾಗಾಗಿ ತುಳಸಿ ದಳ ಹಾಕಿದಾಗ ಅದಕ್ಕೆ ಹೆಚ್ಚು ಮಹತ್ವ ಬರುತ್ತದೆ ಎನ್ನುವ ನಂಬಿಕೆ.

ತುಳಸಿ ದಳ ಸಹಿತ ನೀಡಿದಾಗ ಕೃಷ್ಣ ಪರಮಾತ್ಮನ ಆಶೀರ್ವಾದವೂ ಸಿಗುತ್ತದೆ. ಇದರಿಂದ ನಾವು ನೀಡುವ ದಾನ, ಧರ್ಮಕ್ಕೆ ಹೆಚ್ಚು ಮೌಲ್ಯ ಬರುತ್ತದೆ ಎನ್ನುವುದು ನಂಬಿಕೆ. ಹಾಗಾಗಿ ಯಾವುದೇ ದಾನ ನೀಡುವುದಿದ್ದರೂ, ತುಳಸಿ ದಳ ಸಹಿತ ನೀಡಬೇಕು ಎನ್ನುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ