ದೇವರಿಗೆ ಕರ್ಪೂರದ ಆರತಿ ಬೆಳಗುವುದು ಯಾಕೆ?

ಶನಿವಾರ, 13 ಮೇ 2017 (08:54 IST)
ಬೆಂಗಳೂರು: ದೇವರಿಗೆ ಕರ್ಪೂರದ ಆರತಿ ಬೆಳಗಿ ವಂದಿಸುವುದು ವಾಡಿಕೆ. ಕರ್ಪೂರ ಬೆಳಗಿದಾಗ ಪ್ರಕಾಶಮಾನವಾಗಿ ಬೆಳಗಿ ನಂತರ ಸುಟ್ಟು ಹೋಗುತ್ತದೆ.

 
ಇದು ಯಾಕೆ ವಿಶೇಷ? ಕರ್ಪೂರ ಸುಟ್ಟು ಹೋದಂತೆ ನಮ್ಮೊಳಗಿರುವ ಋಣಾತ್ಮಕ ಅಂಶಗಳು ಉರಿದು ಭಸ್ಮವಾಗಲಿ. ಮನಸ್ಸು ನಿರ್ಮವಾಗಲಿ ಎನ್ನುವುದು ಇದರ ಹಿಂದಿರುವ ನಂಬಿಕೆ.

ವೈಚಾರಿಕವಾಗಿ ನೋಡುವುದಾದರೆ, ಬತ್ತಿಯ ದೀಪಕ್ಕಿಂತ ಕರ್ಪೂರದ ದೀಪ ಹೆಚ್ಚು ಪ್ರಕಾಶಮಾನವಾಗಿರುತ್ತದೆ. ಇದರಿಂದ ದೇವರ ವಿಗ್ರಹ ಪ್ರಕಾಶಮಾನವಾಗಿ ಕಾಣುತ್ತದೆ. ಮಾತ್ರವಲ್ಲ ಸುತ್ತಮುತ್ತಲಿ ಪ್ರದೇಶವೂ ಸುಂದರವಾಗಿ ಕಾಣುವುದು.

ಅಷ್ಟೇ ಅಲ್ಲದೆ, ಕರ್ಪೂರದ ಆರತಿ ಬೆಳಗುವುದರಿಂದ ಪರಿಸರಕ್ಕೂ ಒಳ್ಳೆಯದಂತೆ. ಅದು ಕೊಡುವ ಸುವಾಸನೆ ಒಂದೆಡೆಯಾದರೆ, ಕರ್ಪೂರದ ಆರತಿ ಸುತ್ತಲಿನ ವಾತಾವರಣವನ್ನು ನಿರ್ಮಲಗೊಳಿಸುವುದಲ್ಲದೆ, ಅದರ ಸೇವನೆ ಶ್ವಾಸಕೋಶಕ್ಕೂ ಒಳ್ಳೆಯದು. ನಾವು ಬೆಳಗುವ ಆರತಿಯಿಂದ ಎಷ್ಟೆಲ್ಲಾ ಲಾಭವಿದೆ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ