ದೇವರಿಗೆ ಬಲ ಬದಿಯಿಂದಲೇ ಪ್ರದಕ್ಷಿಣೆ ಬರಬೇಕು ಯಾಕೆ?

ಮಂಗಳವಾರ, 16 ಮೇ 2017 (08:23 IST)
ಬೆಂಗಳೂರು: ದೇವಸ್ಥಾನಕ್ಕೆ ಹೋದರೆ ಮೂರು ಮೂರು ಸುತ್ತು ಪ್ರದಕ್ಷಿಣೆ ಬರುತ್ತೇವೆ. ಈ ರೀತಿ ಬಲ ಬದಿಯಿಂದ ಪ್ರದಕ್ಷಿಣೆ ಬರುವುದು ಯಾಕೆ ಎಂದು ತಿಳಿಯೋಣ.

 
ಪ್ರ ಎಂದರೆ ಆರಂಭ ಮತ್ತು ದಕ್ಷಿಣೆ ಎಂದರೆ ಬಲಭಾಗ. ಬಲ ಎಂದರೆ ಶಕ್ತಿ ಹಾಗಿರುವಾಗ ನಮಗೆ ಭಕ್ತಿ, ಶ್ರದ್ಧೆಯೊಂದಿಗೆ ಭಗವಂತನ ಅನುಗ್ರಹ ಬೇಕಾದರೆ ಬಲಬದಿಯಿಂದಲೇ ಪ್ರದಕ್ಷಿಣೆ ಬರಬೇಕು. ಬಲ ಎಂದರೆ ಶುಭವೂ ಹೌದು.

ಹಾಗಾಗಿ ಬಲಬದಿಯಿಂದ ಪ್ರದಕ್ಷಿಣೆ ಹಾಕಿದರೆ, ಶ್ರವಣ, ಗ್ರಹಣ, ದೃಷ್ಟಿ, ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಅಲ್ಲದೆ, ಪ್ರದಕ್ಷಿಣೆ ಬರುವಾಗ ಅವಸರ ಮಾಡದೇ ನಿಧಾನವಾಗಿ ಭಗವಂತನ ಧ್ಯಾನ ಮಾಡಿಕೊಂಡು ಸುತ್ತು ಹಾಕುವುದರಿಂದ ದೇವರ ಕೃಪೆಗೆ ಪಾತ್ರರಾಗುವಿರಿ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ