ವರಮಹಾಲಕ್ಷ್ಮಿ ಹಬ್ಬ ಆಚರಿಸುವುದೇಕೆ?

ಶುಕ್ರವಾರ, 4 ಆಗಸ್ಟ್ 2017 (08:57 IST)
ಬೆಂಗಳೂರು: ಹೆಂಗಳೆಯರು ವಿಶೇಷವಾಗಿ ಆಚರಿಸುವ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ಹಬ್ಬವೂ ಒಂದು. ಅದರ ವಿಶೇಷತೆಗಳೇನು ನೋಡೋಣ.


ಪ್ರತೀ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ವ್ರತಾಚರಿಸಲಾಗುತ್ತದೆ. ದೇವತೆಗಳು ಮತ್ತು ಅಸುರರು ವಾಸುಕಿಯ ಸಹಾಯದಿಂದ ಮಂದರ ಪರ್ವತವನ್ನು ಕಡೆಯುವಾಗ ಶ್ರೀ ಲಕ್ಷ್ಮಿ ಶ್ವೇತವರ್ಣೆಯಾಗಿ ಕ್ಷೀರ ಸಾಗರದಲ್ಲಿ ಉದ್ಭವಿಸುತ್ತಾಳೆ.

ಲಕ್ಷ್ಮಿ ಎಂದರೆ ಪರಿಶುದ್ಧತೆಯ ಸಂಕೇತವಾದ್ದರಿಂದ ಇಂದು ಮನೆಯನ್ನು ಶುಚಿಗೊಳಿಸಿ, ಅಲಂಕಾರ ಮಾಡಿ ಶುಭ್ರ ಬಟ್ಟೆ ತೊಟ್ಟು ಪೂಜೆ ಮಾಡುತ್ತಾರೆ. ಅವರವರ ಯಥಾಶಕ್ತಿ, ಧನ, ಹೂವು ಇಟ್ಟು ಲಕ್ಷ್ಮೀ ದೇವಿಗೆ ಅಲಂಕಾರ ಮಾಡಿ ಪೂಜೆ ಮಾಡುತ್ತಾರೆ.

ವಿಶೇಷವಾಗಿ ಇಂದು ಬಿಲ್ವ ಪತ್ರೆಯಿಂದ ತಾಯಿಗೆ ಪೂಜಿಸಬೇಕು. ಬಿಲ್ವ ಪತ್ರೆಯಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ. ಹಾಗಾಗಿ ಅದನ್ನು ಪೂಜೆ ಮಾಡಿದರೆ ದೇವಿ ಒಲಿಯುವಳೆಂಬುದು ನಂಬಿಕೆ. ಲಕ್ಷ್ಮೀ ಪೂಜೆಯನ್ನು ಗೋಧೂಳಿ ಮುಹೂರ್ತದಲ್ಲಿ ಮಾಡಿದರೆ ಉತ್ತಮ. ಯಾರು ನಿಷ್ಠೆಯಿಂದ ಪೂಜೆ ಮಾಡುತ್ತಾರೋ ಅವರಿಗೆ ದೇವಿ ಒಲಿಯುತ್ತಾಳೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ