ಶಿವ ದೇಗುಲದಲ್ಲಿ ಅರ್ಧ ಪ್ರದಕ್ಷಿಣೆ ಯಾಕೆ ಗೊತ್ತಾ?

ಗುರುವಾರ, 23 ಫೆಬ್ರವರಿ 2017 (11:53 IST)
ಬೆಂಗಳೂರು: ದೇವಾಲಯಕ್ಕೆ ಹೋದರೆ, ದೇವರಿಗೆ ಪ್ರದಕ್ಷಿಣೆ ಹಾಕುವ ಸಂಪ್ರದಾಯವಿದೆ. ಭಕ್ತಿಯಿಂದ ಮೂರು ಮೂರು ಸುತ್ತು ಪ್ರದಕ್ಷಿಣೆ ಮಾಡಿ ಕೈ ಮುಗಿಯುತ್ತೇವೆ. ಆದರೆ ಕೆಲವು ಶಿವ ದೇಗುಲದಲ್ಲಿ ಅರ್ಧ ಸುತ್ತು ಪ್ರದಕ್ಷಿಣೆ ಹಾಕಬೇಕೆಂಬ ನಿಯಮಿರುತ್ತದೆ. ಯಾಕೆ?

 
ಎಲ್ಲಾ ಶಿವ ದೇಗುಲಗಳಲ್ಲಿ  ಈ ನಿಯಮವಿರುವುದಿಲ್ಲ. ಉದ್ಭವ ಲಿಂಗವಿರುವ ಶಿವ ದೇಗುಲದಲ್ಲಿ ಪೂರ್ಣ ಸುತ್ತು ಪ್ರದಕ್ಷಿಣೆ ಹಾಕಬೇಕು. ಯಾಕೆಂದರೆ ಶಿವಲಿಂಗದ ಪ್ರಭಾವಳಿಯನ್ನು ತಡೆದುಕೊಳ್ಳುವ ಶಕ್ತಿ ಸಾಮಾನ್ಯರಾದ ನಮಗಿಲ್ಲ ಎನ್ನುವ ಕಾರಣಕ್ಕೆ ಪೂರ್ಣ ಸುತ್ತು ಹಾಕಲು ಹೇಳುತ್ತಾರೆ. ಪ್ರತಿಷ್ಠಾಪಿತ ಲಿಂಗವಿರುವಲ್ಲಿ ಅರ್ಧ ಸುತ್ತು ಹಾಕಬೇಕು.

ಅದೇ ರೀತಿ ದೇವಾಲಯದಲ್ಲಿ ನೇರವಾಗಿ ನಿಂತು ದೇವರಿಗೆ ಕೈ ಮುಗಿಯಬಾರದು. ಬದಿಯಲ್ಲಿ ನಿಂತು ಕೈ ಮುಗಿಯಬೇಕು. ದೇವರ ದೃಷ್ಟಿಯನ್ನು ನೇರವಾಗಿ ತಡೆದುಕೊಳ್ಳುವ ಶಕ್ತಿ ನಮಗಿಲ್ಲ ಎನ್ನುವ ಕಾರಣಕ್ಕೆ ಬದಿಯಿಂದ ನಿಂತು ಕೈ ಮುಗಿಯಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ