ಪರಮಾತ್ಮನಿಗೆ ನೈವೇದ್ಯ ಅರ್ಪಿಸಿ ಮತ್ತೆ ನಾವೇ ತಿನ್ನುವುದೇಕೆ?

ಭಾನುವಾರ, 11 ಜೂನ್ 2017 (10:12 IST)
ಬೆಂಗಳೂರು: ಪೂಜಾ ವಿಧಿ ವಿಧಾನಗಳಲ್ಲಿ ನೈವೇದ್ಯವೂ ಒಂದು. ವಿವಿಧ ಭಕ್ಷ್ಯಗಳನ್ನು ತಯಾರಿಸಿ ಪರಮಾತ್ಮನಿಗೆ ನೈವೇದ್ಯ ಅರ್ಪಿಸಿದ ಮೇಲೆ ಅದನ್ನು ನಾವು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತೇವೆ.

 
ಇದು ಯಾಕೆ? ಪರಮಾತ್ಮನ ದಿವ್ಯ ಸ್ಪರ್ಶದಿಂದ ನಾವು ಅರ್ಪಿಸಿದ ನೈವೇದ್ಯ ಪವಿತ್ರವಾಗುವುದು. ಅವನು ನೀಡಿದ್ದನ್ನು ಅವನಿಗೇ ಅರ್ಪಿಸಿ ನಂತರ ನಾವು ತಿನ್ನಬೇಕು.

ಹಾಗಾದರೆ ದೇವರು ಆಹಾರ ಸೇವಿಸುವುದನ್ನು ನಾವು ನೋಡುವುದೇ ಇಲ್ಲ ಎಂದು ಕೆಲವರು ಕುಚೋದ್ಯ ಮಾಡಬಹುದು. ಆದರೆ ನಾವು ಅರ್ಪಿಸಿದ ಫಲವಸ್ತುಗಳನ್ನು ಭಗವಂತ ತನ್ನ ದೃಷ್ಟಿಯಿಂದಲೇ ಸ್ವೀಕರಿಸುತ್ತಾನೆ ಎಂಬ ನಂಬಿಕೆ. ಹಾಗಾಗಿ ಅತ್ಯಂತ ಶುಚಿಯಾಗಿ, ರುಚಿಯಾಗಿ ಮಾಡಿದ ಪ್ರಸಾದವನ್ನು ಅವನು ದೃಷ್ಟಿಯಿಂದಲೇ ಸ್ವೀಕರಿಸುತ್ತಾನೆ ಎಂಬುದು ನಂಬಿಕೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ