ಕಂಗನಾ ರನೌಟ್ ಳನ್ನು ಹೊಗಳಿ ಪತ್ರ ಬರೆದ ಬಿಗ್ ಬಿ ಅಮಿತಾಬ್ ಬಚ್ಚನ್...

ಸೋಮವಾರ, 24 ಮಾರ್ಚ್ 2014 (10:22 IST)
PR
ಕೆಲವರ ಬದುಕೇ ಹಾಗೆ, ಯಾವ ಗಳಿಗೆಯಲ್ಲಿ ಬದಲಾಗುತ್ತದೆಯೋ ಗೊತ್ತೇ ಇರಲ್ಲ. ಕಂಗನಾ ಲೈಫ್ ನಲ್ಲೂ ಸಹ ಇಂತಹದ್ದೇ ಆಗಿದೆ. ಇತ್ತೀಚಿನ ತನಕ ಆಕೆಯೊಬ್ಬ ಸಾಮಾನ್ಯ ಗ್ಲಾಮರಸ್ ನಟಿ ಆಗಿದ್ದವಳು ಕ್ವೀನ್ ಚಿತ್ರದಲ್ಲಿ ನಟಿಸಿಯಾದ ಬಳಿಕ ತನ್ನ ಇಮೇಜನ್ನೇ ಬದಲಾಯಿಸಿ ಕೊಂಡು ಬಿಟ್ಟಿದ್ದಾಳೆ, ಆಕೆ ಅತ್ಯದ್ಭುತವಾದ ನಟಿ ಎನ್ನುವ ಪ್ರಶಂಸೆಗೆ ಪಾತ್ರಳಾಗಿದ್ದಾಳೆ.

ಕೇವಲ ಬಾಲಿವುಡ್ ಮಂದಿಯಲ್ಲ, ಭಾರತೀಯ ಚಿತ್ರರಂಗದವರು ಆಕೆಯತ್ತ ವಿಶೇಷ ದೃಷ್ಟಿ ಹರಿಸಿದ್ದಾರೆ. ಇವರೆಲ್ಲರ ಕಥೆ ಒಂದೆಡೆ ಇರಲಿ, ಈಕೆಯ ಅಭಿನಯಕ್ಕೆ ಮೆಚ್ಚುಗೆಯನ್ನು ತೋರಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಸಾಬ್ ಅವರು ಕಂಗನಾಗೆ ಒಂದು ಬೊಕ್ಕೆ ಮತ್ತು ಒಂದಷ್ಟು ಪ್ರಶಂಸನೀಯ ಸಾಲುಗಳನ್ನು ಹೊಂದಿರುವ ಪತ್ರವನ್ನು ಸಹ ಕಳುಹಿಸಿ ಕೊಟ್ಟಿದ್ದಾರಂತೆ. ಇದರಿಂದ ಆಕೆಗೆ ಸಿಕ್ಕಾಪಟ್ಟೆ ಖುಷಿ ಆಗಿದೆ.

ವೆಬ್ದುನಿಯಾವನ್ನು ಓದಿ