ಅಂತೂ ಮದ್ವೆ ಆಗ್ತಾಳಂತೆ ಸೆಕ್ಸಿ ಬಿಪಾಸ ಬಸು

ಶನಿವಾರ, 5 ಏಪ್ರಿಲ್ 2014 (13:44 IST)
ತನ್ನ ಮಾಜಿ ಪ್ರೇಮಿ ಜಾನ್ ಅಬ್ರಹಾಂ ಹೊಸ ವರ್ಷದ ಆರಂಭದಲ್ಲಿ ತನ್ನ ಪ್ರೇಮಿ
ಪ್ರಿಯಾ ರಂಚೆಲ್ ಜೊತೆ ಮದುವೆ ಆದ ಸಂಗತಿ ಕೇಳಿದ ತಕ್ಷಣ ಬಿಪಾಸ ಬಸು ಒಂದು ನಿರ್ಧಾರಕ್ಕೆ ಬಂದಿದ್ದಾಳಂತೆ. ಆಕೆಯೂ ಸಹ ತನ್ನ ಹಾಲಿ ಪ್ರೇಮಿ ಹರ್ಮಾನ್ ಬವೇಜಾ ಜೊತೆಯಲ್ಲಿ ಮದುವೆ ಆಗಲು ಸಿದ್ಧ ಆಗುತ್ತಿದ್ದಾಳೆ. ಅಂದರೆ ಈ ವರ್ಷದಲ್ಲಿಯೇ ಆಕೆ ಮದುವೆ ಆಗಲು ನಿರ್ಧರಿಸಿದ್ದಾಳಂತೆ.

ಆದರೆ ತನ್ನ ನಿರ್ಧಾರವನ್ನು ಟ್ವಿಟ್ಟರ್ ನಲ್ಲಿ ಹೇಳದೆ ನೇರವಾಗಿ ಮಾಧ್ಯಮಿಗಳಿಗೆ ತಿಳಿಸಿದ್ದಾಳೆ ಆಕೆ.ಆದರೆ ತಮ್ಮ ಮದುವೆ ಬಗ್ಗೆ ಈ ಜೋಡಿ ಅಧಿಕೃತವಾಗಿ ನಿರ್ಧಾರಕ್ಕೆ ಬರುವುದು ಧಿಶ್ಕಿಯೋನ್ ಸಿನಿಮಾದ ಬಳಿಕ!ಈ ಚಿತ್ರವನ್ನು ಶಿಲ್ಪಾ ಶೆಟ್ಟಿ ಮತ್ತು ಆಕೆಯ ಪತಿ ರಾಜ್ ಕುಂದ್ರಾ ಅವರ ಪ್ರೊಡಕ್ಷನ್ ಹೌಸ್ ನಿಂದ ತಯಾರಾಗುತ್ತಿದೆ.ಈ ಚಿತ್ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗುತ್ತದೆ.

ವೆಬ್ದುನಿಯಾವನ್ನು ಓದಿ