ಕನ್ನಡದ ಬಗ್ಗೆ ಸೊಲ್ಲೆತ್ತುವ ಹಾಗಿಲ್ಲ:ಕಮಲ್ ಹಾಸನ್ ಗೆ ಕೋರ್ಟ್ ಆರ್ಡರ್
ಥಗ್ ಲೈಫ್ ಸಿನಿಮಾ ಈವೆಂಟ್ ನಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ವಿವಾದ ಮಾಡಿಕೊಂಡಿದ್ದರು. ಇದೂ ಸಾಲದೆಂಬಂತೆ ತಮ್ಮ ಹೇಳಿಕೆಗೆ ಕ್ಷಮೆ ಯಾಚಿಸಲೂ ಒಪ್ಪಲಿಲ್ಲ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿತ್ತು. ಥಗ್ ಲೈಫ್ ಸಿನಿಮಾ ನಿಷೇಧ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿ ನಿಷೇಧ ತೆರವುಗೊಳಿಸಿದ್ದರು. ಆದರೆ ಆಗಲೇ ಸಿನಿಮಾ ತೋಪೆದ್ದು ಹೋಗಿತ್ತು. ಹೀಗಾಗಿ ಕರ್ನಾಟಕದಲ್ಲಿ ಯಾರೂ ಸಿನಿಮಾ ಬಿಡುಗಡೆ ಮಾಡಲು ಒಪ್ಪಿರಲಿಲ್ಲ.
ಇದೀಗ ಕಮಲ್ ಹಾಸನ್ ಹೇಳಿಕೆ ವಿರುದ್ಧ ಕನ್ನಡ ಸಾಹಿತ್ ಪರಿಷತ್ ಕೋರ್ಟ್ ಮೊರೆ ಹೋಗಿದ್ದು, ಈ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಲಯ ಕನ್ನಡದ ಬಗ್ಗೆ ಯಾವುದೇ ಕಾಮೆಂಟ್ ಮಾಡದಂತೆ ನಿರ್ಬಂಧ ಹೇರಿದೆ. ಕನ್ನಡವನ್ನು ಅಪಮಾನಿಸುವಂತೆ ಯಾವುದೇ ಹೇಳಿಕೆ ನೀಡದಂತೆ ಮುಂದಿನ ವಿಚಾರಣೆವರೆಗೆ ತಾತ್ಕಾಲಿಕ ತಡೆಯಾಜ್ಞೆ ವಿಧಿಸಿದೆ.