ಅಂಧನ ಪಾತ್ರದಲ್ಲಿ ಧನುಷ್ ?

ಶನಿವಾರ, 4 ಜನವರಿ 2014 (10:30 IST)
PR
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ಧನುಶ್ ಕೊಲವರಿ ಡಿ ಹಾಡಿನ ಮುಖಾಂತರ ಹೆಚ್ಚು ಜನಪ್ರಿಯತೆ ಪಡೆದರು ಆ ಬಳಿಕ ಅವರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಬಾಲಿವುಡ್ ಬಾಗಿಲು ತಟ್ಟಿದರು ರಾಂಝಾನ ಸಿನಿಮಾದ ಮುಖಾಂತರ. ಆ ಚಿತ್ರ ಹಿಟ್ ಆಯಿತು. ಈ ಮೂಲಕ ದಕ್ಷಿಣದವರು ಬಾಲಿವುಡ್ ಮಂದಿಯನ್ನು ಗೆಲ್ಲ ಬಲ್ಲರು ಎಂಬುದನ್ನು ಸಾಬೀತು ಮಾಡಿದರು.

ಈಗ ಮತ್ತೊಮ್ಮೆ ಬಾಲಿವುಡ್ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ. ಭಾಲ್ಕಿ ಅವರ ನಿರ್ದೇಶನದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಪಾ ನಂತಹ ವಿಶೇಷ ಚಿತ್ರವನ್ನು ನಿರ್ದೇಶಿಸಿರುವ ಭಾಲ್ಕಿ ಚಿತ್ರರಂಗದ ಕ್ರಿಯೇಟಿವ್ ನಿದೇಶಕ. ಅವರು ಏನೇ ಕೊಟ್ಟರು ಅದು ಹೊಸ ರೀತಿಯದ್ದಾಗಿರುತ್ತದೆ.


PR
ಅಂತಹ ವಿಭಿನ್ನ ನಿರ್ದೇಶಕರ ಕೈಕೆಳಗೆ ದುಡಿಯುವ ಅವಕಾಶ ಧನುಶ್ಗೆ ದೊರೆತಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದರಲ್ಲಿ ನಟ ಧನುಶ್ ಮೂಗನ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ತನ್ನ ಎರಡನೆಯ ಸಿನಿಮಾದಲ್ಲಿ ಪ್ರಯೋಗಾತ್ಮಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಧನುಶ್ ಬಗ್ಗೆ ಬಾಲಿವುಡ್ ನಟರು ಸ್ವಲ್ಪ ಚಿಂತಿಸುವಂತೆ ಮಾಡಿದೆ ಎನ್ನುತ್ತಿದೆ ಸುದ್ದಿ ಮೂಲಗಳು.

ಈ ಚಿತ್ರದ ಮೂಲಕ ಕಮಲಾ ಹಾಸನ್ ಅವರ ಎರಡನೇ ಮಗಳು ಅಕ್ಷರ ಹಾಸನ್ ಚಿತ್ರರಂಗಕ್ಕೆ ತೆರಂಗೇಂಟ್ರಂ ಮಾಡುತ್ತಿದ್ದಾಳೆ. ಇಷ್ಟೆಲ್ಲಾ ಸಿದ್ಧತೆಗಳು ಆಗಿರುವ ಈ ಚಿತ್ರವೂ ಗೆಲುವನ್ನು ಸಾಧಿಸಿದರೆ ಧನುಶ್ ಬಾಲಿವುಡ್ ಕೆರಿಯರ್ ಮತ್ತಷ್ಟು ಉಜ್ವಲವಾಗುತ್ತದೆ ಎನ್ನುವ ಸಂಗತಿ ಈಗ ಎಲ್ಲೆಡೆ ! ರಾಂಝಾನ ಸಿನಿಮಾ ವೀಕ್ಷಿಸಿದ ಬಳಿಕ ಹಿರಿಯ ನಟ ಬಿಗ್ ಬಚ್ಚನ್ ಸಾಹೇಬರು ಧನುಶ್ ಅವರನ್ನು ಕರೆದು ಪ್ರಶಂಸಿಸಿದ್ದರು . ಈಗ ಅವರು ಈತನ ಜೊತೆ ನಟಿಸಲು ಸಿದ್ಧರಾಗಿದ್ದಾರೆಂದರೆ ಧನುಶ್ ಅವರ ಪ್ರತಿಭೆ ಬಗ್ಗೆ ಹೇಳುವಷ್ಟಿಲ್ಲ. ಈ ಚಿತ್ರಕ್ಕೆ ಇಳೆಯರಾಜ ಸಂಗೀತ, ಪಿ.ಸಿ ರಾಮ್ ಅವರ ಛಾಯಾಗ್ರಹಣ ಇದೆ.

ವೆಬ್ದುನಿಯಾವನ್ನು ಓದಿ